ಬಸನಗೌಡ ಯತ್ನಾಳ ಕೇಳಿಕೊಂಡು ರಾಜ್ಯಾಧ್ಯಕ್ಷ ಮಾಡುವ ಅವಶ್ಯಕತೆ ನಮಗಿಲ್ಲ ನೂತನ ಸಚಿವ ಕೆ. ಎಸ್ ಈಶ್ವರಪ್ಪ ಟಾಂಗ್... K.S.E vs basangouda patil yatnal...

Thu, Aug 22, 2019

ವಿಜಯಪುರ : ರಾಜ್ಯದ್ಯಕ್ಷ ಸ್ಥಾನ‌ ನೀಡುವ ವಿಚಾರ ಯತ್ನಾಳ ಗೆ ಕೇಳಿ ಕೊಡುವದಿಲ್ಲ, ಬಸನಗೌಡ ಪಕ್ಷದಲ್ಲಿ ಇದ್ದು ಹೀಗೆ ಹೇಳಿಕೆ ನೀಡಬಾರದು, ಭಗವಂತ ಅವರಿಗೆ ತಿದ್ದಿ ಕೊಳ್ಳುವ ಬುದ್ಧಿ ನೀಡಲಿ ರಾಜ್ಯದ್ಯಕ್ಷ ಸ್ಥಾನ‌ ನೀಡುವ ವಿಚಾರ ಬಸನಗೌಡ ಪಾಟೀಲ್ ಯತ್ನಾಳ ಗೆ ಕೇಳಿ ಕೊಡುವದಿಲ್ಲ, ಬಸನಗೌಡ ಪಕ್ಷದಲ್ಲಿ ಇದ್ದು ಹೀಗೆ ಹೇಳಿಕೆ ನೀಡಬಾರದು, ಭಗವಂತ ಅವರಿಗೆ ತಿದ್ದಿಕೊಳ್ಳುವ ಬುದ್ದಿ ಕೊಡಲಿ ಹೀಗೇಂದು ಹೇಳಿದ್ದು ಸಚಿವ ಕೆ.ಎಸ್.ಈಶ್ವರಪ್ಪ...


ವಿಜಯಪುರ ದಲ್ಲಿ ಇದು ಮಾದ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ ಇಂತಹ ಜಲ ಪ್ರಳಯ ನಾನೇಂದು ಕಂಡಿರಲಿಲ್ಲ. ಇದರಿಂದಾಗಿ ಜನ‌ಜಾನುವಾರು ಆಸ್ತಿ ಪಾಸ್ತಿ ಸಂಪೂರ್ಣ ಹಾಳಾಗಿ ಹೋಗಿದೆ.

ತೊಂದರೆಗಿಡಾದ ಜನ ಜಾನುವಾರ, ವ್ಯಕ್ತಿಗಳಿಗೆ ತಾತ್ಕಾಲಿಕ ಮತ್ತು ಪರ್ಮನೆಂಟ್ ಪರಿಹಾರ ಆಗಲೇ ಬೇಕು. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹೊಣೆ ಹಾಗೂ ಕರ್ತವ್ಯ. ಇನ್ನು ಇದಕ್ಕೆ ನಿರೀಕ್ಷೆಗೆ ಮೀರಿ ಸಂಘ ಸಂಸ್ಥೆಗಳು, ಜನರು ನಮಗೆ ಸಹಕಾರ ನೀಡಿದ್ದಾರೆ. ರಾಜ್ಯ ಸರ್ಕಾರ ಈ ಬಾರಿ ನೆರೆ ಸಂತ್ರಸ್ತರಿಗೆ ೧೦ ಸಾವಿರ ಕೊಡಲು ನಿರ್ಧರಿಸಲಾಗಿದೆ. ಸಮಿಕ್ಷೆ ಈಗಾಗಲೇ ಮುಗಿದಿದ್ದು ನೆರೆ ಸಂತ್ರಸ್ಥರ ಅಕೌಂಟ್ ಗಳಿಗೆ ಹತ್ತು ಸಾವಿರ ತಲುಪುವದು ಎಂದರು. ಇನ್ನು ಮಂತ್ರಿ ಮಂಡಲದ ವಿಸ್ತರಣೆ ಬಳಿಕ ಎಲ್ಲ ಸಚಿವರು ಹಲವೆಡೆ ಪ್ರವಾಸ ಕೈಗೊಳ್ಳುತ್ತಿದ್ದಾರೆ.‌ ನಾನು ಹಾಗೂ ಸಚಿವ ಗೋವಿಂದ್ ಕಾರಜೋಳ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇವೆ, ಬೆಳೆ ಪರಿಹಾರದ ಜೊತೆಗೆ ರೈತರ ಹೊಲಗದ್ದೆಗಳಿಗೆ ಮರಳು ನುಗ್ಗಿದ ಹಿನ್ನಲೆ ಭೂಮಿ‌ ಫಲವತ್ತತೆ ಕಳೆದುಕೊಂಡಿದೆ. ಹೀಗಾಗಿ ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಕೊಡುವ ನಿಟ್ಟಿನಲ್ಲಿ ನಾವು ಚಿಂತೆ ಮಾಡುತ್ತಿದ್ದೇವೆ. ಇನ್ನು ಸಂತ್ರಸ್ತರಿಗೆ ಕೂಡಾ ಸರ್ಕಾರದ ಮೇಲೆ ಅಧಿಕಾರಿಗಳ ಮೇಲೆ ನಂಬಿಕೆ ಬರುತ್ತಿದೆ. ಕೇಂದ್ರ ಸರ್ಕಾರದಿಂದ ಮುಂಚೆಯೇ ೧೨೮ ಕೋಟಿ ಬಿಡುಗಡೆ ಮಾಡಲಾಗಿತ್ತು, ಹಾಗೂ ೧೦೨೮ ಕೋಟಿ ಬರಗಾಲದ ವಿಚಾರದಲ್ಲಿ ನಿನ್ನೆ ಬಿಡುಗಡೆ ಆಗಿದೆ.

ಸದ್ಯ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಅಕೌಂಟ್ ಗೆ ೧ ಕೋಟಿ ನೀಡಲಾಗಿದೆ. ಬೇರೆ ಬೇರೆ ರಾಜ್ಯಗಳಿಗೆ ಹೆಚ್ಚಿಗೆ ಬಿಡುಗಡೆಯಾಗಿರಬಹುದು, ಆದರೆ ಈಗ ಸದ್ಯ ಇನ್ನೂ ಸಮಿಕ್ಷೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿಗೆ ಬರುವ ನಿರಿಕ್ಷೆ ಇದೆ. ನೆರೆ ವಿಚಾರದಲ್ಲಿ ಕೇಂದ್ರದಿಂದ ಎಷ್ಟು ತರಬೇಕೋ ಅಷ್ಟು ತಂದೇ ತರುತ್ತೇವೆ ಎಂದರು. ಇನ್ನು ಕೆಲವೆಡೆ

ಪ್ರವಾಹ ಪೀಡಿತ ಸಂತ್ರಸ್ಥರ ಸ್ಥಳಾಂತರ ಆಗುತ್ತಿಲ್ಲ,ಸಂತ್ರಸ್ತರಿಗೆ ಹೊಸ ಮನೆ ಕಟ್ಟಿ ಕೊಟ್ಟಾಗ ಅವರು ಹಳೇ ಮನೆ ಬಿಟ್ಟು ಹೋಗಲ್ಲ. ಹೀಗಾಗಿ ಅವರು ಮತ್ತೆ ಪ್ರವಾಹಕ್ಕೆ ತುತ್ತಾಗುತ್ತಾರೆ.

ಈ ಬಾರಿ ಹೋಸ ಮನೆ ಕಟ್ಟಿ ಸಂತ್ರಸ್ತರಿಗೆ ಕೊಟ್ಟರೆ ಹಳೆ ಮನೆಗಳನ್ನು ಡೆಮಾಲಿಶ್ ಮಾಡಿಯೇ ಕೊಡಲಾಗುವದು ಎಂದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಯಾರು ಯಾರಿಗೆ ಬೇಕಾದ್ರು ಗಡುವ ಕೊಡಬಹುದು.

ಬಾಲಚಂದ್ರ ಜಾರಕಿಹೋಳಿ ಹೇಳಿದ್ದು ನಮ್ಮ ಕುಟುಂಬಕ್ಕೆ ಹಿಂದಿನಿಂದಲೂ ಮಂತ್ರಿ ಸ್ಥಾನ‌ ಇತ್ತು.‌ ಸಚಿವ ಸ್ಥಾನ ಸಿಗದೇ ಇದಿದ್ದಕ್ಕೆ ಸ್ವಲ್ಪ ಅಸಮಾಧಾನ ಇದೆ ಹಾಗೆಂದ ಮಾತ್ರಕ್ಕೆ ನಾನು ಬಿಜೆಪಿ ಸರ್ಕಾರವನ್ನು ಬೀಳಿಸಲ್ಲ ಎಂದು ಕೂಡಾ ಹೇಳಿದ್ದಾರೆ.

ಬಾಲಚಂದ್ರ ಜಾರಕಿಹೋಳಿ ಅವರಿಗೂ ಸ್ಥಾನ ಮಾನ ಕೊಡಬೇಕಾಗಿರುವದು ನಮ್ಮ ಕರ್ತವ್ಯ, ಅದನ್ನು ಕೊಡುತ್ತೇವೆ ಎಂದರು. ಇನ್ನು ಮಾಜಿ ಸ್ಪೀಕರ್ ರಮೇಶ ಕುಮಾರ ಅಂಬೇಡ್ಕರ್ ಬಿಟ್ಟರೆ ನಾನೇ ಎನ್ನುತ್ತಾರೆ, ಸುಪ್ರೀಂ ಕೊರ್ಟ ಮಾತನ್ನು‌ ಮೀರಿ ಅವರು ಅನರ್ಹ ಎಂದು ಘೋಷಣೆ ಮಾಡಿದ್ದಾರೆ. ಅವರು ಕಾಂಗ್ರೆಸ್ ಎಜೇಂಟ್ ತರ ವರ್ತಿಸಿದ್ದಾರೆ ಎಂದರು. ಇನ್ನು ರಾಜ್ಯದ್ಯಕ್ಷ ಸ್ಥಾನದ ವಿಚಾರವಾಗಿ ಮಾತನಾಡುತ್ತಾ

ಬಸನಗೌಡ ಪಾಟೀಲ್ ಮಾತನ್ನು ಕೇಳಿ ರಾಜ್ಯಾದ್ಯಕ್ಷ ಸ್ಥಾನ ಕೊಡುವ ಅವಶ್ಯಕಥೆ ನಮಗಿಲ್ಲ. ಅವರು ನಮ್ಮ ಪಕ್ಷದಲ್ಲೇ ಇದ್ದು ಈ ರೀತಿಯ ಹೇಳಿಕೆ ಕೊಡಬಾರದು, ಅವರು ತಿದ್ದಿಕೊಳ್ಳಬೇಕು. ನಳಿನ್ ಕುಮಾರ ಅದ್ಯಕ್ಷರಾದ ಹಿನ್ನಲೆ ಭಾರತೀಯ ಜನತಾ ಪಾರ್ಟಿ ಎಲ್ಲಾ ಕಾರ್ಯಕರ್ತರು ಅವರಿಗೆ ಸಹಕಾರ ನೀಡುತ್ತಾರೆ. ಅವರು ಯಾರು ಎಂಬುದು ಎಲ್ಲರಿಗೂ ಗೊತ್ತಾಗಲಿದೆ ಇನ್ನು ಮುಂದೆಯಾದರೂ ದೇವರು ಯತ್ನಾಳ ಅವರಿಗೆ ಬುದ್ದಿ ಕೊಡಲಿ ಎಂದರು...

Like our news?