ವಿವಿ ಪ್ಯಾಟ ಮಶೀನ್ ಗಳು ಪತ್ತೆ...ಇದು ನಮ್ಮದೆ ನಮ್ಮದೆ ಅಂತಿದ್ದಾರೆ ರಾಜಕಾರಣಿಗಳು...

Sun, May 20, 2018

 ವಿಜಯಪುರ--ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಯಾಕಂದ್ರೆ ಅಜ್ಞಾತ ಸ್ಥಳದಲ್ಲಿ ಎಂಟು ವಿವಿ ಪ್ಯಾಟ್ ಮಶೀನ್ ಗಳು ಪತ್ತೆಯಾಗಿವೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಹೊರವಲಯದಲ್ಲಿರುವ ಶೆಡ್ ವೊಂದರಲ್ಲಿ ಎಂಟು ವಿವಿ ಪ್ಯಾಟ್ ಗಳು ಪತ್ತೆಯಾಗಿವೆ. ಇದೀಗ ಈ ಮಶೀನಗಳು ಹಲವು ಅನುಮಾನ ಹಾಗೂ ಗೋಲಮಾಲ್ ಗಳಿಗೆ ಸಾಕ್ಷಿಯಾಗಿವೆ. ಇನ್ನು ಒಟ್ಟು 8 ವಿವಿ ಪ್ಯಾಟ್ ಹಾಗೂ ಬಾಕ್ಸ್ ಗಳು ಪತ್ತೆಯಾಗಿದ್ದು, ಸ್ಥಳಕ್ಕೆ ನೂರಾರು ಸಾರ್ವಜನಿಕರು ಭೇಟಿ ನೀಡುತ್ತಿದ್ದಾರೆ. ಅಲ್ಲದೇ

ಈ ಚುನಾವಣೆಯಲ್ಲಿ ಹಲವು ಅಕ್ರಮ ಮತದಾನ ನಡೆದಿದೆ ಎನ್ನಲು ಇದೊಂದು ಉದಾಹರಣೆ ಆಗಿದೆ. ಅಕ್ರಮದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸಬೇಕು ಎನ್ನುತ್ತಿದ್ದಾರೆ ಸಾರ್ವಜನಿಕರು. ಅಲ್ಲದೆ ವಿಜಯಪುರದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ ಮುಶ್ರೀಫ್ ಸಹ ಇವು ವಿಜಯಪುರ ನಗರ ಕ್ಷೇತ್ರಕ್ಕೆ ಸಂಭಂದಿಸಿದ ಮಶೀನಗಳಾಗಿವೆ. ನಮ್ಮ ವಿರುದ್ಧ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ನು ಮತ ಎಣಿಕೆ ದಿನವೇ ಬಬಲೇಶ್ವರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ವಿಜುಗೌಡ ಪಾಟೀಲ್ ಅವರೂ ಸಹ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯಲ್ಲಿ ಗೋಲಮಾಲ್ ನಡೆದಿದೆ ಎಂದು ಆರೋಪಿಸಿದ್ರು. ಒಟ್ಟಿನಲ್ಲಿ ವಿಜಯಪುರ ಕ್ಷೇತ್ರದ್ದಾ ಅಥವಾ ಬಬಲೇಶ್ವರ ಕ್ಷೇತ್ರದ್ದಾ ಮಶೀನಗಳು ಎಂಬುದು ತಿಳಿಯಬೆಕಿದೆ. ಅಲ್ಲದೆ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಿದೆ. ಇದೀಗ ಸ್ಥಳಕ್ಕೆ ಮನಗೂಳಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಮಶೀನಗಳನ್ನು ವಶ ಪಡಿಸಿಕೊಂಡಿದ್ದಾರೆ...

Like our news?