ವಿದ್ಯುತ್ ಶಾರ್ಟ್ ಸರ್ಕ್ಯೂಟ್ಗೆ ಆರು ಎಕರೆಯಲ್ಲಿದ್ದ ಕಬ್ಬು ಸುಟ್ಟು ಕರಕಲು..!

Tue, Feb 10, 2026

ವಿಜಯಪುರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ಗೆ ಆರು ಎಕರೆಯಲ್ಲಿದ್ದ ಕಬ್ಬು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ...


ಹೌದು ಸಿಂದಗಿ ತಾಲೂಕಿನ ಸುಂಗಠಾಣ ಗ್ರಾಮದ ಹಣಮಂತಪ್ಪ ಗುರಲಿಂಗಪ್ಪ ಬಿರಾದಾರ ಉರ್ಫ್ ಕುರನಳ್ಳಿ ಇವರ 6 ಎಕರೆ ಜಮೀನಿನಲ್ಲಿ ಬೆಳೆದು ನಿಂತ ಕಬ್ಬು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ...

ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಂದಾಜು 7 ಲಕ್ಷ ಮೌಲ್ಯದ ಕಬ್ಬು ಸುಟ್ಟು ಹೋಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು , ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..!


Like our news?