ವಿಜಯಪುರ : ನಗರದ ಹೊರಭಾಗದ ರಂಭಾಪೂರ ಕ್ರಾಸ್, ಜೆ ಎಸ್ ಎಸ್ ಆಸ್ಪತ್ರೆ ಮುಂಬಾಗ ಇರುವ ಕಾರ್ ಸರ್ವಿಸ್ ಸೆಂಟರ್ ನಲ್ಲಿ ಅಗ್ನಿ ಅವಘಡ ಸಂಭವಿಸಿ ಇಪ್ಪತ್ತಕ್ಕೂ ಹೆಚ್ಚು ಕಾರು ಸುಟ್ಟು ಕರಕಲಾಗಿದೆ...
ಹೌದು ಹಣಮಂತ ಕನಮಡಿ ಎಂಬುವರ HMK ಕಾರ್ ಸರ್ವಿಸ್ ಸ್ಟೇಶನ್ ನಲ್ಲಿ ಮದ್ಯ ರಾತ್ರಿ 1:30 ರ ಸುಮಾರಿಗೆ ಹೊತ್ತಿಕೊಂಡ ಬೆಂಕಿಯಿಂದ ಕಾರ್ ಸ್ಟೇಷನ್ ಸಂಪೂರ್ಣ ಸುಟ್ಟು ಕರಕಲಾಗಿದೆ...
ಅಗ್ನಿಶಾಮಕ ದಳದಿಂದ ಬಹಳ ಬೆಂಕಿನಂದಿಸುವ ಕಾರ್ಯವಾಗಿದ್ದು , ಮದ್ಯ ರಾತ್ರಿ ಘಟನೆ ನಡೆದಿರುವುದುದರಿಂದ ಯಾವೂದೇ ಪ್ರಾಣ ಹಾನಿ ಸಂಭವಿಸಿಲ್ಲ, ಕೋಟ್ಯಾಂತರ ರೂಪಾಯಿ ವಸ್ತುಗಳ ಅಗ್ನಿಗಾಹುತಿಯಾಗಿದ್ದು ಗೋಳಗುಮ್ಮಟ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ...
Sign up here to get the latest post directly to your inbox.