ಸಿಎಂ ಸಿದ್ದರಾಮ್ಯಯ್ಯ ಅವರಿಗೆ ೧೦ ಕ್ಕೆ ೧೧ ಅಂಕ ನೀಡಿದ ಸಚಿವ ಎಂ.ಬಿ.ಪಾಟೀಲ..!

Tue, Jan 06, 2026

ವಿಜಯಪುರ : ಸಿಎಂ.ಸಿದ್ದರಾಮ್ಯಯ್ಯ ನವರ ಇಂದಿನ ಅವದಿ ಅವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸ ಅವರ ಅವದಿಗೆ ಸಮಾನವಾಗಿದ್ದು ರಾಜ್ಯದೆಲ್ಲೆಡೆ ಮುಖ್ಯಮಂತ್ರಿ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದ್ದು ಇಂದು ವಿಜಯಪುರ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರಾದ ಎಂ.ಬಿ.ಪಾಟೀಲ...


ಸಿಎಂ ಸಿದ್ದರಾಮಯ್ಯನವರು ಮತ್ತು ದೇವರಾಜ್ ಅರಸು ಇಬ್ಬರು ಮುತ್ಸಧ್ದಿ ನಾಯಕರು ದೇವರಾಜ ಅರಸ‌ ಅವರು ಬಡವರು ದಲಿತರ ಧೀಮಂತ ನಾಯಕರಾಗಿ ಬೆಳೆದವರು ಹಾಗೇನೆ  ಸಿದ್ದರಾಮ್ಯಯ್ಯ ಅವರು ಕೂಡ ಇಂದಿಗೂ ಸಹ ಸರಿಸಮಾನವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ನಾಳೆ ಅದನ್ನು ಮೀರಿಸುತ್ತಾರೆ ಅವರದು ಒಂದು ಹೋರಾಟದ ಹಾದಿಯಾಗಿದ್ದು ರೈತರು,ಬಡವರು ಮತ್ತು ಮಹಿಳೆಯರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿರುವಂತವರು.ಸಿ.ಎಂ.ಸಿದ್ದರಾಮ್ಯಯ್ಯ ಅವರು ರಾಜ್ಯದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವಮತವರು ವಿಷೇಶವಾಗಿ ಅನ್ನ ಭಾಗ್ಯ ಯೋಜನೆ ಬಡವರಿಗೆ ಮತ್ತು ಮಹಿಳೆಯರಿಗೆ ಉಚಿತ ಬಸ ಸೌಲಭ್ಯ ಒದಗಿಸಿದ್ದು ವಿಶೇಷವಾಗಿದೆ ಎಂದರು ಇನ್ನು ಬಿಜೆಪಿ ನಾಯಕರ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಸಾಧನೆ ಎನಿದೆ ಎಲ್ಲರಿಗೂ ಗೊತ್ತು ಅದಲ್ಲದೇ ನಾವು ಎರಡು ಕಾಲಾವದಿಗೆ ಸಿ.ಎಂ.ಅವರನ್ನು ಆಯ್ಕೆಮಾಡಿದ್ದೆವೆ.ನಿಮ್ಮ ಸಾಧನೆ ಎನೆಂದರೆ ನೀವು ಮಾಜಿ ಸಿ.ಎಂ.ಯಡಿಯೂರಪ್ಪ ಅವರ ಕಾಲಾವಧಿಯನ್ನು ಪೂರ್ಣಮಾಡಲು ಬಿಡಲಿಲ್ಲ ಇದು ನಿಮ್ಮ ಸಾಧನೇನಾ ಎಂದು ಸವಾಲು ಹಾಕಿದರು...

Like our news?