ಅಕ್ರಮವಲಸಿಗರಿಗೆ ಅಂತಿಮ ಗಡುವು ನೀಡಿ, ಹೋಗದಿದ್ದರೆ ಗುಂಡಿಕ್ಕಿ ಕೊಲ್ಲಬೇಕು - ಶಾಸಕ ಯತ್ನಾಳ್..!

Thu, Dec 25, 2025

ವಿಜಯಪುರ : ಬಾಂಗ್ಲಾ ಅಕ್ರಮ ವಲಸಿಗರಿಗೆ ಅಂತಿಮ ಗಡುವು ನೀಡಿ, ಹೋಗದಿದ್ದರೆ ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದ್ದಾರೆ...


ಹೌದು ಬಾಂಗ್ಲಾದೇಶದಲ್ಲಿ ಮುಗ್ಧ ಹಿಂದು ಯುವಕನನ್ನು ಸಜೀವ ದಹಿಸಿದ ಘಟನೆಗೆ ಸಂಬಂಧಿಸಿದಂತೆ ಇಂದು ವಿಜಯಪುರ ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಿಂದು ಯುವಕನನ್ನು ಸಜೀವವಾಗಿ ಸುಟ್ಟಿರುವುದು ಅತ್ಯಂತ ನೋವಿನ ಸಂಗತಿ ಇಂತಹ ಹಿಂಸಾಚಾರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡಿಸಬೇಕು ಎಂದು ತಿಳಿಸಿದರು.

ಜೊತೆಗೆ ಭಾರತದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿ ಕಠಿಣ ಕ್ರಮ ಅಗತ್ಯವಿದೆ ಎಂದು ಹೇಳಿದರು. ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ದೇಶದಿಂದ ಹೊರಗೆ ಕಳುಹಿಸಬೇಕು ಜೊತೆಗೆ ಅವರಿಗೆ ಬೆಂಬಲ ನೀಡುವವರ ಮೇಲೂ ಕ್ರಮ ಕೈಗೊಳ್ಳಬೇಕು ಈ ಸಂಬಂಧ ಸರ್ಕಾರ ಅಂತಿಮ ಗಡುವು ನಿಗದಿ ಮಾಡಬೇಕು , ಗಡುವಿನ ನಂತರವೂ ದೇಶ ತೊರೆಯದಿದ್ದರೆ ಗುಂಡಿಕ್ಕಿ ಕೊಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು, ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರ ಹಾಕದಿದ್ದರೆ ದೇಶದ ಭದ್ರತೆಗೆ ಅಪಾಯ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು...

Like our news?