ಲೋಕಾಯುಕ್ತ ಬಲೆಗೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ; ಮನೆಯಲ್ಲಿ ಪತ್ತೆಯಾದ ಲಕ್ಷಾಂತರ ನಗದು, ಬಂಗಾರ.!

Tue, Dec 23, 2025

ವಿಜಯಪುರ : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಮಾಹಿತಿ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮನೆ, ಲಾಕ‌ರ್ ಮತ್ತು ಮಾವನ ಮನೆ ಸೇರಿ ಸುಮಾರು ರೂ.29,42,000 ನಗದು ಹಣ, ಬೆಳ್ಳಿ ಬಂಗಾರದ ಆಭರಣಗಳು, ವಾಹನಗಳು ವಶಕ್ಕೆ ಪಡೆದುಕೊಂಡಿದ್ದಾರೆ...


ಹೌದು ಮಲ್ಲಪ್ಪ ಹನಮಂತಪ್ಪ ಯರಝರಿ, ಬಸವನ ಬಾಗೇವಾಡಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಇವರು ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಮಾಹಿತಿ ಆಧಾರದ ಮೇಲೆ ವಿಜಯಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ. ಆಪಾದಿತ ನೌಕರರಿಗೆ ಸಂಬಂಧಿಸಿದ ಮನೆಯ ಶೋಧನೆ ನಡೆಸಲು ನ್ಯಾಯಾಲಯದಿಂದ ವಾರಂಟ್‌ನ್ನು ಪಡೆದು. ಇಂದು ಬೆಳಿಗ್ಗೆ ಆಪಾದಿತ ನೌಕರರಿಗೆ ಸಂಬಂಧಿಸಿದ ವಿಜಯಪುರ ನಗರದ ನವರಸಪುರದಲ್ಲಿರುವ ಮನೆ, ಆಪಾದಿತ ನೌಕರರಿಗೆ ಸಂಬಂಧಿಸಿದ ಬಸವನ ಬಾಗೇವಾಡಿ ತಾಲ್ಲೂಕಿನ ಕಣಕಾಲ ಗ್ರಾಮದ ಫಾರ್ಮ ಹೌಸ್, ಮುದ್ದೇಬಿಹಾಳ ನಗರದಲ್ಲಿರುವ ಆಪಾದಿತ ಅಧಿಕಾರಿಯ ಮಾವನ ಮನೆ, ಆಪಾದಿತರು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿ ಶೋಧನೆ ಕಾರ್ಯ ನಡೆಸಿ, ಶೋಧನೆ ವೇಳೆ ಆಪಾದಿತರ ವಿಜಯಪುರ ನವರಸಪುರ ಮನೆ, ಲಾಕ‌ರ್ ಮತ್ತು ಮಾವನ ಮನೆ ಸೇರಿ ಸುಮಾರು ರೂ.29,42,000/- ನಗದು ಹಣ, ಬೆಳ್ಳಿ ಬಂಗಾರದ ಆಭರಣಗಳು, ವಾಹನಗಳು ಮತ್ತು ಇತರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲಾತಿಗಳು ದೊರೆತಿದ್ದು, ಅಂದಾಜು 2.50 ಕೋಟಿಗೂ ಹೆಚ್ಚಿನ ಅಕ್ರಮ ಆಸ್ತಿಗಳಿಸಿರುವದು ಪತ್ತೆಯಾಗಿದ್ದು ಸದರಿ ಕಾರ್ಯಾಚರಣೆಯನ್ನು ಟಿ. ಮಲ್ಲೇಶ್, ಪೊಲೀಸ್ ಅಧೀಕ್ಷಕ ಲೋಕಾಯುಕ್ತ ವಿಜಯಪುರ ಮಾರ್ಗದರ್ಶನದಲ್ಲಿ ಮಲ್ಲಿಕಾರ್ಜುನ ತುಳಸಿಗೇರಿ, ಡಿಎಪಿ, ಬಿ.ಎಸ್.ಪಾಟೀಲ್, ಡಿಎಸ್‌ಪಿ, ಪೊಲೀಸ್ ಇನ್ಸಪೆಕ್ಟರ್ ರವರುಗಳಾದ ಆನಂದ ವಿ. ಟಕ್ಕನ್ನವರ್, ಆನಂದ ಡೋಣಿ, ನಿಂಗಪ್ಪ ಪೂಜೇರಿ, ಸಂಗಮನಾಥ ಹೊಸಮನಿ ಹಾಗೂ ಕರ್ನಾಟಕ ಲೋಕಾಯುಕ್ತ, ವಿಜಯಪುರ ಹಾಗೂ ಬೆಳಗಾವಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು...

Like our news?