ವಿಜಯಪುರ : ನೀರು ಕೊಟ್ಟು ನಮ್ಮ ಜಮೀನು ಕಸಿದಕೊಳ್ಳಬೇಡಿ ಎಂದು ರೈತ ಮಹಿಳೆಯರು ಕಣ್ಣಿರಿಟ್ಟಿರುವ ಘಟನೆ ನಡೆದಿದೆ...
ಹೌದು ತಿಡಗುಂದಿ ಸಮೀಪ 1203 ಎಕರೆ ರೈತರ ಫಲವತ್ತಾದ ಕೃಷಿಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಇಂದು ಮಂತ್ರಿ ಎಂ ಬಿ.ಪಾಟೀಲ ಅವರ ನಿವಾಸದಲ್ಲಿ ರೈತರು ಮನವಿ ಮಾಡಿದರು ಈ ವೇಳೆಯಲ್ಲಿ ಆಗಮಿಸಿದ್ದ ರೈತರು ಕಣ್ಣಿರಿಟ್ಟು ನಮ್ಮ ಜಮೀನನ್ನು ಉಳಿಸಿಕೊಡಿ ಎಂದು ಮಂತ್ರಿಗಳಿಗೆ ಮನವಿ ಮಾಡಿದರು..ತಿಡಗುಂದಿ ಗ್ರಾಮದಲ್ಲಿ ನಿನ್ನೆಯ ದಿನ ಕೆ.ಐ.ಡಿ.ಬಿ ಇಲಾಖೆಯಿಂದ ಅಧಿಕಾರಿಗಳು ಭೂಸ್ವಾಧಿನಕ್ಕಾಗಿ ಆಗಮಿಸಿದ ವೇಳೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ ನಂತರ ಅಧಿಕಾರಿಗಳು ಪೋಲಿಸ್ ಇಲಾಖೆಯ ಸಿಬ್ಬಂದಿಗಳನ್ನು ಕರೆಸಿ ಭೂಮಿ ಅಳೆಯುವ ಕೆಲಸ ನಡೆದ ಹಿನ್ನಲೆಯಲ್ಲಿ ಇಂದು ಮಂತ್ರಿಗಳ ಬಳಿ ಬಂದಾಗ ಸಹ ರೈತರ ಮತ್ತು ಮಂತ್ರಿ ಎಂ.ಬಿ ಪಾಟೀಲರ ನಡುವೆ ಮಾತಿನ ಚಕಮಕಿ ನಡೆಯಿತು, ಇನ್ನು ಮಾಧ್ಯಮದ ಜೊತೆ ಮಾತನಾಡಿದ ರೈತರು ಮಂತ್ರಿಗಳೆ ನಮಗೆ ನೀರನ್ನು ಕೊಟ್ಟಿದ್ದಾರೆ ಈಗ ಅವರೆ ನಮ್ಮ ಭೂಮೀಯನ್ನು ಕಸಿಯುವ ಪ್ರಯತ್ನ ಮಾಡುತ್ತಾ ಇದ್ದಾರೆ.ಈ ಜಮೀನು ನಮ್ಮದು ನಾವು ಇದನ್ನು ಸರ್ಕಾರಕ್ಕೆ ಕೊಡುವ ಮಾತೆ ಇಲ್ಲಾ ನಮ್ಮ ಮಕ್ಕಳನ್ನು ಸಹಿತ ನಾವು ರೈತರನ್ನಾಗಿ ಬೆಳೆಸುತ್ತೆವೆ ಆದರೆ ಜಮೀನು ನಾವು ಮಾರಾಟ ಮಾಡಲ್ಲ ಇದೆ ಜಮೀನು ನಮ್ಮನ್ನು ಸಾಕಿದ್ದು ಆದ್ದರಿಂದ ಇದನ್ನು ನಾವು ಕೈ ಬಿಡಲ್ಲ.ನಮ್ಮ ಜಮೀನಿನಿಂದ ನಮ್ಮನ್ನು ಬೇರೆ ಮಾಡಬೇಡಿ ಎಂದು ಕಣ್ಣಿರಿಟ್ಟರು...
Sign up here to get the latest post directly to your inbox.