ವಿಜಯಪುರ : ಜನಾರ್ದನ ರೆಡ್ಡಿ ಇತಿಹಾಸ ಜಗತ್ತಿಗೆ ಗೊತ್ತಿದೆ ; ಎಂ.ಬಿ.ಪಾಟೀಲ್ ಟಾಂಗ್ ನೀಡಿದ್ದಾರೆ....
ಹೌದು ವಿಜಯಪುರ ನಗರದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ವಿಜಯಪುರದಲ್ಲಿ ನಡೆದ ರೈತ ಹೋರಾಟದಲ್ಲಿ ಭಾಗವಹಿಸಿದ ಮಾಜಿ ಸಚಿವ ಹಾಗೂ ಶಾಸಕ ಜನಾರ್ದನ ರೆಡ್ಡಿ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಇವರ ವಿರುದ್ಧ ಹರಿಹಾಯ್ದಿದ್ದರು ಇಂದು ಟಾಂಗ್ ನೀಡಿದ ಸಚಿವ ಎಂ.ಬಿ.ಪಾಟೀಲ ಜನಾರ್ದನ ರೆಡ್ಡಿ ಒಬ್ಬ ಲೂಟಿಕೋರ, ದರೋಡೆಕೋರ ಇವರೆಲ್ಲ ರೈತರಂತೆ ಎಂದು ಆಕ್ರೋಶ ಹೊರಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ , ನಾನು ಜನಾರ್ದನ ರೆಡ್ಡಿ ಬಗ್ಗೆ ಮಾತನಾಡಲಿಕ್ಕೆ ಹೋಗುವದಿಲ್ಲಾ , ನನ್ನ ಬಗ್ಗೆ ರೆಡ್ಡಿ ಮಾತನಾಡಿದ್ದಾರೆ ಗೊತ್ತಿದೆ, ನಾ ಮಾತನಾಡಿದರೇ ಬಹಳ ದೊಡ್ಡದಾಗುತ್ತದೆ, ಜನಾರ್ದನ ರೆಡ್ಡಿ ಇತಿಹಾಸ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇಂತಹ ಲೂಟಿಕೋರ, ದರೋಡೆಕೋರ, ಜನಾರ್ದನ ರೆಡ್ಡಿ ಈ ಸಲ ಜನಾರ್ದನ ರೆಡ್ಡಿ ಸೊಲುತ್ತಾನೆ, ಸುಮ್ಮನೆ ಹೋದ ಸಲ ಗೆದ್ದಿದ್ದಾನೆ. ದರೋಡೆಕೋರರು, ಲೂಟಿಕೋರರು ರೈತರಂತೆ ಇವರು, ರೆಡ್ಡಿ ಇತಿಹಾಸ ಇಡೀ ಜಗತ್ತಿಗೆ ಗೊತ್ತಿದೆ ಎಂದು ಟಾಂಗ್ ನೀಡಿದರು...
Sign up here to get the latest post directly to your inbox.