ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ವಿವಿಧ ರೈಲು ನಿಲ್ದಾಣಗಳಿಗೆ ಹೆಸರು ಶಿಫಾರಸ್ಸು..!

Thu, Nov 13, 2025


ಬೆಂಗಳೂರು : ರಾಜ್ಯದ ನಾಲ್ಕು ರೈಲು ನಿಲ್ದಾಣಗಳಿಗೆ ಹೆಸರು ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ...


ಹೌದು ವಿಜಯಪುರ ರೈಲು ನಿಲ್ದಾಣಕ್ಕೆ 'ಶ್ರೀ ಸಿದ್ದೇಶ್ವರ ರೈಲು ನಿಲ್ದಾಣ' ಎಂದು ನಾಮಕರಣ ಮಾಡುವಂತೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು , ಇದೇ ರೀತಿಯಲ್ಲಿ, ಪ್ರಾದೇಶಿಕ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಇತರ ರೈಲು ನಿಲ್ದಾಣಗಳ ಹೆಸರನ್ನು ಬದಲಾಯಿಸಲು ಈ ಕೆಳಗಿನ ಶಿಫಾರಸ್ಸುಗಳನ್ನು ಸಹ ಮಾಡಲಾಗಿದೆ:

ವಿಜಯಪುರ ರೈಲು ನಿಲ್ದಾಣ - ಶ್ರೀ ಸಿದ್ದೇಶ್ವರ ರೈಲು ನಿಲ್ದಾಣ 

 ಬೀದರ್ ನಿಲ್ದಾಣಕ್ಕೆ - ‘ಚನ್ನಬಸವ ಪಟ್ಟದ ದೇವರ ರೈಲು ನಿಲ್ದಾಣ’

ಬೆಳಗಾವಿ ನಿಲ್ದಾಣಕ್ಕೆ - ‘ಶಿವಬಸವ ಮಹಾಸ್ವಾಮಿಜಿ ರೈಲು ನಿಲ್ದಾಣ’

 ಸುರಗೊಂಡನ ಕೊಪ್ಪ ನಿಲ್ದಾಣಕ್ಕೆ - ‘ಭಯಾಗಡ ರೈಲು ನಿಲ್ದಾಣ ಎಂದು ನಾಮಕರಣ ಮಾಡುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ...


Like our news?