ಸಿಂದಗಿಯಲ್ಲಿ ರಾಜ್ಯೋತ್ಸವದ ವೇಳೆ ಎಡವಟ್ಟು - ಉಲ್ಟಾ ಹಾರಾಡಿದ ರಾಷ್ಟ್ರ ಧ್ವಜ..!

Sat, Nov 01, 2025

ವಿಜಯಪುರ : ರಾಜ್ಯೋತ್ಸವದ ಆಚರಣೆ ವೇಳೆಯಲ್ಲಿ ತಾಲೂಕಾಡಳಿತದ ಎಡವಟ್ವಿನಿಂದ ರಾಷ್ಟ್ರ ಧ್ವಜ ಉಲ್ಟಾ ಹಾರಿರುವ ಘಟನೆ ನಡೆದಿದೆ...


ಹೌದು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ ನಡೆದಿದ್ದು ಸಿಂದಗಿ ತಾಲುಕಾ ತಹಸೀಲ್ದಾರ್ ಕಚೇರಿಯಲ್ಲಿ ೭೦ನೇ ರಾಜ್ಯೋತ್ಸವ ಆಚರಣೆ ವೇಳೆಯಲ್ಲಿ ತಹಸೀಲ್ದಾರ್ ಕರಿಯಪ್ಪ ಮತ್ತು ಶಾಸಕ ಅಶೋಕ್ ಮನಗೂಳಿ ಧ್ವಜಾರೋಹಣ ನೇರವೇರಿಸಿದ್ದಾರೆ , ಈ ವೇಳೆಯಲ್ಲಿ ರಾಷ್ಟ್ರಧ್ವಜ ಉಲ್ಟಾ ಹಾರಿದ್ದು ಕಂಡು ಕೂಡಲೇ ಕೆಳಗೆ ಇಳಿಸಿದ್ದಾರೆ...


ಅಧಿಕಾರಿಗಳ ಈ ಬೇಜವಾಬ್ದಾರಿ ಧೋರಣೆಗೆ ಜನತೆ ಖಂಡಿಸಿದ್ದು ಇದೀಗ ವಿಡಿಯೋ ವೈರಲ್ ಆಗತೊಡಗಿದ್ದು, ಬೇಜವಾಬ್ದಾರಿ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಲು ನೆಟ್ಟಿಗರು ಆಗ್ರಹಿಸಿದ್ದಾರೆ...

Like our news?