ವಿಜಯಪುರ: ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಬಿಜೆಪಿ () ಮುಖಂಡ ವಿಜುಗೌಡ ಪಾಟೀಲ್ ಪುತ್ರ ಹಲ್ಲೆ ನಡೆಸಿರುವ ಘಟನೆ ನಡೆದಿದೆ
ಹೌದು ವಿಜಯಪುರ-ಕಲಬುರಗಿ ಟೋಲ್‌ನಲ್ಲಿ ನಡೆದಿದ್ದು ಬಬಲೇಶ್ವರ ಮತಕ್ಷೇತ್ರದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಅವರ ಪುತ್ರ ಸಮರ್ಥಗೌಡ ಪಾಟೀಲ್ ಹಾಗೂ ಸ್ನೇಹಿತರು ವಿಜಯಪುರದಿಂದ ಕಪ್ಪು ಬಣ್ಣದ ಥಾರ್‌ನಲ್ಲಿ ಸಿಂದಗಿ ಕಡೆ ಹೊರಟಿದ್ದರು. ಈ ವೇಳೆ ಜಿಲ್ಲೆಯ ಕನ್ನೊಳ್ಳಿ ಗ್ರಾಮದ ಬಳಿಯಿರುವ ಟೋಲ್‌ನಲ್ಲಿ ಹಣ ಪಾವತಿಸಲು ಹೇಳಿದಾಗ ಆಗ ಸಮರ್ಥಗೌಡ ನಾನು ವಿಜೂಗೌಡ ಪಾಟೀಲ್ ಪುತ್ರ ಎಂದು ಹೇಳಿದ್ದಾನೆ. ಆಗ ಟೋಲ್ ಸಿಬ್ಬಂದಿ ಯಾವ ವಿಜುಗೌಡ ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ಸಮರ್ಥಗೌಡ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ...
Sign up here to get the latest post directly to your inbox.