ವಿಜಯಪುರದಲ್ಲಿ ಮತ್ತೆ ಭೂಕಂಪನ ; ಸಿಸಿಟಿವಿಯಲ್ಲಿ ಸೆರೆಯಾದ ಭೂಕಂಪನ ದೃಶ್ಯ..!

Wed, Oct 29, 2025

ವಿಜಯಪುರ : ನಿನ್ನೆ ರಾತ್ರಿ 11.41 ಹಾಗೂ ನಸುಕಿನ ಜಾವ 5.30 ರ‌ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ನಡೆದಿದ್ದು ಭೂಕಂಪನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ...


ಹೌದು ವಿಜಯಪುರ ಜಿಲ್ಲೆಯಲ್ಲಿ ಸರಣಿ ಭೂಕಂಪನ ಕ್ಕೆ ಜಿಲ್ಲೆಯ ಜನರು ಭಯದಲ್ಲೆ ಕಾಲ ಕಳೆಯುವಂತಾಗಿದೆ...

ಜಿಲ್ಲೆಯಾದ್ಯಂತ ಕಳೆದ 2 ತಿಂಗಳಲ್ಲಿ 11 ಭಾರೀ ಭೂಮಿ ಕಂಪಿಸಿದ ಅನುಭವವಾಗಿದ್ದು , ಸಿಸಿಟಿವಿ ಕ್ಯಾಮರಾಗಳಲ್ಲು ಭೂಕಂಪನದ ತೀವ್ರತೆ ದಾಖಲಾಗಿದ್ದು, ಭೂಮಿ ಕಂಪಿಸುತ್ತಿದ್ದಂತೆ ಶ್ವಾನಗಳು ಊಳಿಟ್ಟಿವೆ...

ಇನ್ನೂ ಭೂಕಂಪನ ಆಪ್ ಗಳಲ್ಲಿ 3.0 ತೀವ್ರತೆ ದಾಖಲಾಗಿದ್ದು , ಸರಣಿ ರೂಪದಲ್ಲಿ ಆಗ್ತಿರೋ ಭೂಕಂಪಗಳಿಂದ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ....

Like our news?