ವಿಜಯಪುರ : ಮುಸ್ಲಿಂ ಯುವತಿಯರನ್ನ ಮದುವೆಯಾದರೆ 5 ಲಕ್ಷ ನೀಡುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಯತ್ನಾಳಗೆ ಮುಸ್ಲಿಂ ಮುಖಂಡ ಹಾಗೂ ಕರವೇ ಅಧ್ಯಕ್ಷರ ಕೌಂಟರ್ ಕೊಟ್ಟಿದ್ದಾರೆ.
ಹೌದು ಕೊಪ್ಪಳದಲ್ಲಿ ನಡೆದ ಯುವಕನ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾಸಕ ಯತ್ನಾಳ ಹೇಳಿಕೆ ನೀಡಿದ್ದರು.
ಇದೀಗ ವಿಜಯಪುರ ಜಿಲ್ಲೆಯ ಮುಸ್ಲಿಂ ಮುಖಂಡ ಹಾಗೂ ಕರವೇ ಅಧ್ಯಕ್ಷ ಎಂ.ಸಿ.ಮುಲ್ಲಾ ಪೆಸ್ಬುಕ್ ಪೋಸ್ಟ್ ಹಾಕಿ ಟಾಂಗ್ ನೀಡಿದ್ದಾರೆ..
ಗಾಂ.... ಯತ್ನಾಳನ ಮನೆತನದ ಹೂಡಿಗಿಯರಿಗೆ ಪಟಾಯಿಸಿ ನಮ್ಮ ಹುಡುಗರು ಮದುವೆಯಾದರೆ 10 ಲಕ್ಷ ರೂ ಕೊಡಲಾಗುವುದು ಎಂಬ ಅಶ್ಲೀಲ ಶಬ್ದಗಳ ಬಳಸಿ ಪೋಸ್ಟ್ ಹಾಕಿದ್ದಾರೆ. ಅಲ್ಲದೇ ಯತ್ನಾಳ ತನ್ನ ಮನೆತನದ ಹುಡುಗಿಯರಿಗೆ ಬೇರೆ ಜಾತಿಯ ಹುಡುಗರ ಜೊತೆ ಮದುವೆ ಮಾಡಿಸಿ ಕೊಟ್ಟರೆ 25 ತೊಲೆ ಬಂಗಾರ, ಒಂದು ಬಂಗಲೆ ಒಂದು ಕಾರು ಉಡುಗೊರೆಯಾಗಿ ನೀಡಲಾಗುವುದು.ಇದಕ್ಕಿಂತ ಹೆಚ್ಚಿಗೆ ಬೇಕಾದರೂ ಸಮಾಜ ದಿಂದ ಚಂದಾ ಎತ್ತಿ ಕೊಡಲಾಗುವುದು ಎಂದು ಮತ್ತೊಂದು ಪೋಸ್ಟ್ ಹಾಕಿ ಶಾಸಕ ಯತ್ನಾಳ ವಿರುದ್ಧ ಮುಸ್ಲಿಂ ಮುಖಂಡ ಕಿಡಿಕಾರಿದ್ದಾರೆ. ಇನ್ನೂ ಪೋಸ್ಟ್ ಗೆ ಪರ ವಿರೋಧ ಕಾಮೆಂಟ್ ಗಳು ಹಾಗೂ ಅಭಿಪ್ರಾಯಗಳು ವ್ಯಕ್ತವಾಗಿದ್ದು .
ಎಂ.ಸಿ.ಮುಲ್ಲಾ ಮುಸ್ಲಿಂರ ವಿರುದ್ಧ ಹೇಳಿಕೆ ನೀಡಿದಾಗಲೆಲ್ಲಾ ಕೌಂಟರ್ ಕೊಡುತ್ತಾ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಜೊತೆಗೆ ಗುರುತಿಸಿಕೊಂಡಿರುವ ಎಂ.ಸಿ.ಮುಲ್ಲಾ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ...
Sign up here to get the latest post directly to your inbox.