ವಿಜಯಪುರ : ಸಿದ್ದರಾಮಯ್ಯ ನರೇಂದ್ರ ಮೋದಿ ಸಾಧನೆಗೆ ಸೊನ್ನೆ ಕೊಟ್ಟಿರುವ ವಿಚಾರದಲ್ಲಿ ಸಂಸದ ಗೋವಿಂದ ಕಾರಜೋಳ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ...
ಹೌದು ವಿಜಯಪುರ ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ ನರೇಂದ್ರ ಮೋದಿ ಆಡಳಿತದ ಮೌಲ್ಯ ಮಾಪನ ಮಾಡುವ ನೈತಿಕತೆ ಸಿದ್ದರಾಮಯ್ಯಗಿಲ್ಲ ನೀವು ಅಧಿಕಾರಕ್ಕೆ ಬಂದು ಎರಡು ವರ್ಷವಾಯಿತು ಬಜೆಟ್ ಮಂಡಿಸಿದಾಗ ಎರಡು ಭಾಗವಾಗಿ ವಿಂಗಡಿಸಬೇಕಿತ್ತು, ಪ್ಲ್ಯಾನ್ಡ್ ಹಾಗೂ ನಾನ್ ಪ್ಲ್ಯಾನ್ಡ್ ತರಹ ಮಾಡಬೇಕಿತ್ತು ಎಂದರು, ಸಿದ್ದರಾಮಯ್ಯ ನವರೇ ನೀವು ನರೇಂದ್ರ ಮೋದಿ ಅವರಿಗೆ ಜಿರೋ ಮಾರ್ಕ್ಸ್ ಕೊಡುವ ಬದಲು ನೀವು ಎರಡು ವರ್ಷದಲ್ಲಿ ಮಾಡಿದ ಅಭಿವೃದ್ಧಿ, ಸಾಧನೆ ವಿಚಾರವಾಗಿ ಶ್ವೇತ ಪತ್ರ ಹೊರಡಿಸಿ ಎಂದು ಗುಡುಗಿದರು, ಆಲಮಟ್ಟಿ ಯೋಜನೆಗೆ ಕೃಷ್ಣಾ ಮೇಲ್ದಂಡೆದೆ ಯೋಜನೆಗೆ ಎಷ್ಟು ಸಾವಿರ ಕೊಟ್ಟೀದ್ದೀರಿ ಹೇಳಿ , ಬ್ಯಾಂಕಿನಿಂದ ಸಾಲ ಮಾಡಿದ ಸಾಲ ಹಾಗೂ ಸರ್ಕಾರಿ ನೌಕರರ ಸಂಬಳ ಕೊಡುವುದೇ ನಿಮಗೆ ಕಷ್ಟವಾಗಿದೆ.
ಕಳೆದ ನಾಲ್ಕು ತಿಂಗಳಲ್ಲಿ 700 ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರವಾಗಿದೆ. ಆರ್ ಸಿ ಬಿ ವಿಜಯೋತ್ಸವ ಆಚರಣೆ ವೇಳೆ 11 ಜನ ಮೃತಪಟ್ಟರು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಆಡಳಿತದ ವೇಳೆ ಕೊಲೆ, ಅತ್ಯಾಚಾರ ಸುಲಿಗೆ ನಡೆಯುತ್ತಿದೆ, ತಮಗೆ ಯಾವ ನೈತಿಕತೆ ಇದೆ ಪ್ರಧಾನಿಗಳ ಆಡಳಿತ ವೈಖರಿ ಮಾರ್ಕ್ಸ ಕೊಡಲು ಎಂದು ಸಂಸದ ಗೋವಿಂದ ಕಾರಜೋಳ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು...
Sign up here to get the latest post directly to your inbox.