ವಿಜಯಪುರ : ಈರುಳ್ಳಿ ಬೆಲೆ ತೀವ್ರ ಕುಸಿತಗೊಂಡ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಪ್ಪಕಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಈರುಳ್ಳಿ ರಾಶಿಗಳನ್ನು ಸುರಿದು ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ..
ಹೌದು ಕುಪ್ಪಕಡಿ ಬಳಿಯ ತೋಟಗಾರಿಕಾ ಎಫ್‌ಪಿಒ (ರೈತ ಉತ್ಪಾದಕರ ಸಂಸ್ಥೆ) ಆವರಣದಲ್ಲಿ ಈರುಳ್ಳಿ ಸುರಿಯಲಾಗಿದ್ದು. ಉತ್ತಮ ಗುಣಮಟ್ಟದ ಈರುಳ್ಳಿಯನ್ನು ಕ್ವಿಂಟಾಲ್‌ಗೆ ಕೇವಲ 200 ರೂ.ಗೆ ಹರಾಜು ಮಾಡಲಾಗುತ್ತಿದೆ. ಈರುಳ್ಳಿ ಬೆಳೆದ ರೈತರು ಕಡಿಮೆ ಬೆಲೆಗೆ ಅತೃಪ್ತಿ ವ್ಯಕ್ತಪಡಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈರುಳ್ಳಿ ಸುರಿದ ನಂತರ ಮಲ್ಲಿಕಾರ್ಜುನ ಪೋಲಕೊಂಡ ಎಂಬ ರೈತನ ಮೇಲೆ ದಾಳಿ ಮಾಡಲಾಗಿದೆ. ಬಾಗಲಕೋಟೆಯಲ್ಲಿ, ಅದೇ ಈರುಳ್ಳಿಯನ್ನು ಕ್ವಿಂಟಾಲ್‌ಗೆ 1000 ರೂ.ಗೆ ಮಾರಾಟ ಮಾಡಲಾಗಿದೆ. ಡಿಎಪಿ ಗೊಬ್ಬರ 1200 ರೂ., ಯೂರಿಯಾ 300 ರೂ. ನಾವು ಕಷ್ಟಪಟ್ಟು ಈರುಳ್ಳಿ ಏಕೆ ಬೆಳೆಸಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ...
Sign up here to get the latest post directly to your inbox.