ವಿಜಯಪುರ : ನಮ್ಮದು ಧರ್ಮ ಮಾಡಿದ ಕುಟುಂಬ ಪಾದಯಾತ್ರಿಗಳಿಗೆ ಕಡಲೆ ಕೊಟ್ಟಿದ್ದು ಅದಕ್ಕೆ ಧರ್ಮ ಕಡಲೆ ಅಂತಾ ಬಿರುದು ಬಂದಿದ್ದು ಹಚಡದ ಎಂದು ಅಲ್ಲಾ ಎಂದು ಬಸವನಗೌಡ ಪಾಟೀಲ ಯತ್ನಾಳ ಟಾಂಗ್ ನೀಡಿದ್ದಾರೆ...
ಹೌದು ವಿಜಯಪುರ ನಗರದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಜಯಪುರ ನಗರ ಶಾಸಕ ಯತ್ನಾಳ ಮಾತನಾಡುತ್ತಾ ವಿಜುಗೌಡಾ ಪಾಟೀಲ ಅವರ ಧರ್ಮಕಡಲೆ ಎನ್ನುವ ಅಡ್ಡ ಹೆಸರಿನ ಹಿಂದಿನ ಸತ್ಯ ಬಹಿರಂಗ ಪಡಿಸುತ್ತಾ ನಮ್ಮ ಹಿರಿಯರ ಕಾಲದಲ್ಲಿ ನಮ್ಮ ಕೆಂಭಾವಿಯಲ್ಲಿ ಮಲ್ಲಯ್ಯನ ಪಾದಯಾತ್ರೆಗೆ ತೆರಳುವ ಬಕ್ತರು ನಮ್ಮ ಜಮೀನಿನ ಮಧ್ಯದಲ್ಲಿ ಹಾದು ಹೋಗುತ್ತಿದ್ದರು ಆವಾಗ ಜಮೀನಿನಲ್ಲಿ ಬೆಳೆದ ಕಡಲೆಯನ್ನು ಸಹ ಪಾದಯಾತ್ರಿಗಳು ತಿನ್ನುತ್ತಿದ್ದರು. ಎಷ್ಟೇ ತಿಂದರು ವರ್ಷದ ಒಳಗೆ ಮತ್ತೆ ಬೆಳೆ ಬೆಳೆದು ನಿಲ್ಲುತ್ತಿತ್ತು ಅದಕ್ಕೆ ಜನ ನಮ್ಮ ಕುಟುಂಬಕ್ಕೆ ಧರ್ಮಕಡಲೆ ಎನ್ನುವ ಬಿರುದು ಕೊಟ್ಟಿದ್ದು ಹಚಡದ ಅಲ್ಲಾ ಎಂದು ವಿಜುಗೌಡ ಪಾಟೀಲ ಅವರಿಗೆ ಟಾಂಗ ನೀಡಿದರು...
Sign up here to get the latest post directly to your inbox.