ಅಲ್ ಅಮೀನ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗೆ ರ್ರ್ಯಾಂಗಿಂಗ್ ಪ್ರಕರಣ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ಹೇಳಿದ್ದೇನು ಗೊತ್ತಾ..!

Wed, Feb 19, 2025


ವಿಜಯಪುರಅಲ್ ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ವೈದ್ಯಕೀಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿ ಮೇಲೆ ರ್ಯಾಗಿಂಗ್ ಮಾಡಿದ ಪ್ರಕರಣ ನಡೆದಿದೆ..


ಹೌದು ವಿಜಯಪುರದ ನಗರದ ಅಥಣಿ ರಸ್ತೆಯಲ್ಲಿರುವ  ಅಲ್ ಅಮೀನ್ ಮೆಡಿಕಲ್ ಕಾಲೇಜಿನಲ್ಲಿ ಘಟನೆ ನಡೆದಿದೆ..ಮಂಗಳವಾರ ಸಂಜೆ ಸುಮಾರು ೪ ಘಂಟೆಯಲ್ಲಿ  ಕ್ರಿಕೆಟ್ ಆಟದ ವೇಳೆ 2022ರ ಬ್ಯಾಚ್‌ ನ ಜಮ್ಮು ಕಾಶ್ಮೀರದ ಅನಂತನಾಗ ಜಿಲ್ಲೆಯ ಹಮೀಮ್ ಎಂಬ ಪ್ರಥಮ ವರ್ಷದ  ಎಂ.ಬಿ.ಬಿ.ಎಸ್ ವಿದ್ಯಾರ್ಥಿಗೆ ಆಟದ ಮೈದಾನ ದಿಂದ ಹಿಂದೆ ಸರಿದು ನಿಲ್ಲಲು ಹಿರಿಯ ವಿದ್ಯಾರ್ಥಿಗಳು ಆದೇಶ ಅದರ ನಂತರ ನಾನು ಕೂಡ 2022.23  ರ ಕ್ರಿಕೆಟ್ ಟೀಮ‌ನ ನಾಯಕನಾಗಿದ್ದು ಹಿಂದೆ ಸರಿಯಲು ಒಪ್ಪದಿದ್ದಾಗ   ಗಲಾಟೆ ನಡೆದಿದೆ..2019 ರ ಬ್ಯಾಚ್ ನ ಹಿರಿಯ ವಿದ್ಯಾರ್ಥಿಗಳ ಮತ್ತು 2022 .23  ರ ಕ್ರಿಕೆಟ್ ಮ್ಯಾಚ ನಡೆದ ಸಂದರ್ಭ.. 2022.23.ರ ಬ್ಯಾಚ್ ನ ಕ್ಯಾಪ್ಟನ್ ಆಗಿದ್ದ ಹಮೀಮ್.ಮ್ಯಾಚ್ ವೇಳೆ ಹಿರಿಯ ವಿದ್ಯಾರ್ಥಿಗಳ ಜೊತೆ ಗಲಾಟೆ.ಇದಾದ ಬಳಿಕ ರಾತ್ರಿ ಹಾಸ್ಟೆಲ್ ಗೆ ನುಗ್ಗಿದ ಹಿರಿಯ ವಿದ್ಯಾರ್ಥಿಗಳು ಹಮೀಮ ಅನ್ನು ಹೊಡೆದು ಬಡಿದು ಅಲ್ ಅಮಿನ್ ನ ಸಲ್ಯೋಟ್ ಮಾಡಲು ಹಾಡು ಹಾಡಲು ಅಲ್ಲದೇ  ಡ್ಯಾನ್ಸ್ ಮಾಡುವಂತೆ ರ್ಯಾಗಿಂಗ್ ಮಾಡಿ ಬಳಿಕ ಇನ್ನು ನಾಲ್ಕು ವರ್ಷ ಇಲ್ಲೆ ಇರ್ತಿಯಾ ಹುಷಾರ್ ನಾವು ಲೋಕಲ್ ನೀನು ಜಮ್ಮುವಿನವನು  ಎಂದು ಎಚ್ಚರಿಕೆ ಕೊಟ್ಟಿರುವ ಘಟನೆ ನಡೆದಿದೆ.ಈ ರ್ಯಾಗಿಂಗ್ ಬಗ್ಗೆ  ಟ್ವೀಟ್ ಮಾಡಿರುವ ಹಮೀಮ್ ಪರಿಚಯದ ವ್ಯಕ್ತಿ ನಾಸೀರ್ ಹುಸೇನಿ ಅವರು ಈ ಬಗ್ಗೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಹಾಗೂ ರಾಜ್ಯದ ಸಿ.ಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರಿಗೆ ಟ್ವಿ್ಟ್ ಮಾಡಿದ್ದಾರೆ...

ರ್ರ್ಯಾಂಗಿಂಗ್ ಪ್ರಕರಣ ಕುರಿತು ವಿದ್ಯಾರ್ಥಿ ಹೇಳಿದ್ದೇನು...👇🏻👇🏻👇🏻

ನಿನ್ನೆ ಸಾಯಂಕಾಲ ನಮ್ಮ ಕ್ರಿಕೆಟ್ ಮ್ಯಾಕ್ ನಡೆದ ಸಂದರ್ಭದಲ್ಲಿ ಸಿನಿಯರ್ಸ ಮತ್ತು ನನ್ನ ನಡುವೆ ವಾಗ್ವಾದ ನಡೆದಿದ್ದು ನಿಜ ನನಗೆ ಅಲ್ಲಿ ಅಲ್ ಅಮಿನ್ ಸಲ್ಯೋಟ್ ಮಾಡಲು ಹೇಳಿದರು ನಂತರ ನನಗೆ ಹಾಡು ಮತ್ತು ಡ್ಯಾನ್ಸ್ ಮಾಡಲು ಹೇಳಿದರು‌.ಅದಲ್ಲದೇ ರಾತ್ರಿ ವೇಳೆ ಹಾಸ್ಟೆಲ್ ಗೆ ಬಂದು ಹೆದರಿಸಿ ಮತ್ತು ಬೆದರಿಸಿ ನನಗೆ ಹೊಡೆದು ಹೋದರು ನಂತರ ನಾನು ಎಕ್ಸ್ ಪೊಸ್ಟ್ ಮಾಡಿದ ನಂತರ ಪೋಲೀಸರು ಬಂದು ವಿಚಾರಿಸಿದ್ದಾರೆ ಅದಲ್ಲದೆ ನನಗೆ ಹೊಡೆದ ಸಿನಿಯರ್ಸ ಎಲ್ಲೊ ಒಡಿ ಹೊಗಿದ್ದು ನಾನು ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದೆನೆ...

ರ್ರ್ಯಾಂಗಿಂಗ್ ಪ್ರಕರಣ ಕುರಿತು ಆಡಳಿತ ಮಂಡಳಿ ಹೇಳುತ್ತಿರುವುದು ...👇🏻👇🏻👇🏻

ಆಡಳಿತ ಮಂಡಳಿಯ ಸದಸ್ಯರಾದ ಡಾ. ಜಿಲಾನಿ ಅವಟಿ ಅವರು ಮಾತನಾಡುತ್ತಾ ನಿನ್ನೆಯ ದಿನ ಮ್ಯಾಚ ನಡೆದ ಸಮಯದಲ್ಲಿ ವಾದ ವಿವಾದಗಳಾಗಿವೆ ಆದರೆ ರಾ್ಗಿಂಗ ನಡೆದಿಲ್ಲ ಎಂದು ಸಾರಾಸಗಟಾಗಿ ತಳ್ಳಿಹಾಕಿದರು ಇನ್ನು ವಿದ್ಯಾರ್ಥಿ ನಮ್ಮ ಆಡಳಿತ ಮಂಡಳಿಯ ಗಮನಕ್ಕೆ ಈ ವಿಷಯ ತಂದಿದ್ದು ನಾವು ಅದನ್ನು ವಿಚಾರಿಸುತ್ತೆವೆ. ನಾನು ಹಲವು ವರ್ಷಗಳಿಂದ ಆಡಳಿತ ಮಂಡಳಿಯ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದು ಇಂಥ ಪ್ರಕರಣ ನಡೆದಿಲ್ಲ ಎಂದರು..

Like our news?