ವಿಜಯಪುರ : ತಾಳಿಕೋಟಿ ತಾಲೂಕಿನ ಬೂದಿಹಾಳ ಪೀರಾಪೂರ ಏತ ನೀರಾವರಿ ಕಾಮಗಾರಿ ಶೀಘ್ರದಲ್ಲಿ ಮುಕ್ತಾಯಗೊಳಿಸಿ ಸಂಪೂರ್ಣ ನೀರಾವರಿಗೊಳಪಡಿಸುವಂತೆ ಆಗ್ರಹಿಸಿ ಇಂದು ವಿಜಯಪುರ ನಗರದ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ತಾಳಿಕೋಟೆಯ ಹಲವು ರೈತರು ಮನವಿ ಪತ್ರವನ್ನು ನೀಡಿದರು ...
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರಾದ ಪ್ರಭುಗೌಡ ಅಸ್ಕಿ ಅವರು ತಾಳಿಕೋಟಿ ತಾಲೂಕಿನಲ್ಲಿ ನೀರಿನ ಸಮಸ್ಯೆ ತೀರ ಗಂಭೀರತೆ ಪಡೆದಿದ್ದು ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಯವರು ಬೂದಿಹಾಳ ಹಾಗೂ ಪೀರಾಪೂರ ಏತ ನೀರಾವರಿಯ 1ನೇ ಹಂತದ ಉದ್ಘಾಟನೆ ಮಾಡಿ 2ನೇ ಹಂತದ ಶಂಖುಸ್ಥಾಪನೆ ನೆರವೇರಿಸಿದ್ದರು. ಆದರೆ ಇಲ್ಲಿಯವರೆಗೂ ಕಾಮಗಾರಿಗೆ ವೇಗ ಸಿಗುತ್ತಿಲ್ಲ ಒಂದು ವೇಳೆ ಈ ಯೋಜನೆ ಸಂಪೂರ್ಣ ಕಾರ್ಯಗತಗೊಂಡರೆ ಅಸ್ಥ್ಕಿ, ನೀರಲಗಿ, ಬೆಕಿನಾಳ, ಜಲಪೂರ, ಬೆನ್ನಟ್ಟಿ, ಬೂದಿಹಾಳ, ಹಾಳ ಗುಂಡಕನಾಳ, ರಾಂಪೂರ, ವಣಕಿಹಾಳ, ತುರುಕಣಗೇರಿ ಸೇರಿ ಒಟ್ಟು 38 ಗ್ರಾಮಗಳಿಗೆ ಒಳಪಟ್ಟಿರುವ ಏತ ನೀರಾವರಿ ಯೋಜನೆ ಇದಾಗಿದೆ. ಇದರಡಿಯಲ್ಲಿ 50,657 ಸಾವಿರ ಎಕರೆಗೂ ಹೆಚ್ಚು ಜಮೀನು ನೀರಾವರಿಗೊಳಪಡುತ್ತದೆ ಆದರೆ ಅಧಿಕಾರಿಗಳ ವಿಳಂಬ ನೀತಿಯಿಂದ ಇಂದು ರೈತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದರು...
Sign up here to get the latest post directly to your inbox.