ವಿಜಯಪುರ : ನಗರದ ಹರಣಶಿಖಾರಿ ಕಾಲೋನಿಯಲ್ಲಿ ಪೊಲೀಸರು ಮಿಂಚಿನ ದಾಳಿ ನಡೆಸಿ ಅಪಾರ ಪ್ರಮಾಣದ ಕಳ್ಳಭಟ್ಟಿ, ಗಾಂಜಾ ವಶಪಡಿಸಿಕೊಂಡಿದ್ದಾರೆ.
ಹೌದು ವಿಜಯಪುರ ನಗರದಲ್ಲಿ ಗೋಳಗುಮ್ಮಟ, ಜಲನಗರ, ಗಾಂಧಿಚೌಕ, ಆದರ್ಶನಗರ, ಎಪಿಎಂಸಿ ಠಾಣೆ ಪೊಲೀಸರಿಂದ ಏಕಕಾಲಕ್ಕೆ ದಾಳಿ ನಡೆಸಿಅ ನುಮಾನಾಸ್ಪದ ೨೫ ಕ್ಕೂ ಅಧಿಕ ಮನೆಗಳಲ್ಲಿ ಶೋಧ ನಡೆಸಿ ಅಂದಾಜು 100 ಲೀ. ಕಳ್ಳಭಟ್ಟಿ, ಅರ್ಧ ಕೆ.ಜಿಯಷ್ಟು ಗಾಂಜಾ ಪತ್ತೆಯಾಗಿದೆ. 56 ಬಾಟಲ್‌ಗಳಲ್ಲಿ ಸಂಗ್ರಹಿಸಿ ಇಟ್ಟಿದ್ದ ಕಳ್ಳಭಟ್ಟಿಯನ್ನು ಸಿಪಿಐ ಮಲ್ಲಯ್ಯ ಮಠಪತಿ, ಪ್ರದೀಪ್ ತಳಕೇರಿ, ರಮೇಶ ಅವಜಿ ಅವರನ್ನು ಒಳಗೊಂಡ ತಂಡ ಕಳ್ಳಭಟ್ಟಿ , ಗಾಂಜಾ ಮಾರಾಟ ಮಾಡುತ್ತಿದ್ದ ಆನಂದ ಚೌಹಾನ್, ರಿಯಾಜ್ ನರಸಲಗಿ , ವಾಸು ಚೌಹಾನ್ ವಶಕ್ಕೆ ಪಡೆದಿದ್ದು , ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ....
Sign up here to get the latest post directly to your inbox.