ಸಚಿವ ಸತೀಶ ಜಾರಕಿಹೊಳಿ ಗೊಂದಲದ ಹೇಳಿಕೆಗೆ ತಳವಾರ ಸಮಾಜದ ಆಕ್ರೋಶ..!

Tue, Jan 28, 2025

ವಿಜಯಪುರ : ಯಾದಗಿರಿಯಲ್ಲಿ ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದಲ್ಲಿ ನಕಲಿ‌ ಜಾತಿ ಪ್ರಮಾಣ ಪತ್ರ ವಿರುದ್ಧ ಹೋರಾಟ ಮಾಡೋಣ ಎಂದು ಹೇಳಿರುವ ಸಚಿವ ಸತೀಶ್ ‌ಜಾರಕಿಹೊಳಿ ಅವರ ಹೇಳಿಕೆಯನ್ನು ಕರ್ನಾಟಕ ರಾಜ್ಯ ತಳವಾರ ಮಹಾಸಭಾ ವೀರೋದಿಸಯತ್ತದೆ ಎಂದು ಜಿಲ್ಲಾ ಅಧ್ಯಕ್ಷರಾದ ಪ್ರಕಾಶ ಸೊನ್ನದ ಅವರು ತಿಳಿಸಿದರು..


ಹೌದು ವಿಜಯಪುರ ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು ಮಾತನಾಡಿದ್ದು ತಪ್ಪು ಯಾವುದೇ ಆಧಾರವಿಲ್ಲದೆ ತಳವಾರ ಸಮುದಾಯವನ್ನು ಅವಮಾನಿಸುವ ಕಾರ್ಯ ಸಚಿವರು ಮಾಡಿದ್ದಾರೆ..ತಳವಾರ ಸಮುದಾಯದ ವಿಷಯ ಕೊರ್ಟನಲ್ಲಿ ಇದ್ದು ಯಾವ ವಿಷಯ ಕೋರ್ಟ್ ಅಲ್ಲಿ ಇದೆ ಅದರ ಬಗ್ಗೆ ಮಾತನಾಡುವದು ಸಂವಿಧಾನದ ವಿರೋಧಿಯಾಗಿದೆ ಎಂದರು...

Like our news?