ವಿಜಯಪುರ : ಇಟ್ಟಿಗೆ ಬಟ್ಟಿ ಕಾರ್ಮಿಕರ ಮೇಲೆ ಮನಸ್ಸೋ ಇಚ್ಛೆಯಾಗಿ ಅಮಾನವೀಯವಾಗಿ ಹಲ್ಲೆ ನಡೆಸಿ ವಿಡಿಯೋ ಹರಿ ಬಿಟ್ಟಿರುವ ಘಟನೆ ನಡೆದಿದೆ....
ಹೌದು ವಿಜಯಪುರ ನಗರದ ಹೊರವಲಯದ ಗಾಂಧಿ ನಗರ ಬಳಿ ಇರುವ ಇಟ್ಟಿಗೆ ತಯಾರಿಸುವ ಬುಟ್ಟಿಯಲ್ಲಿ ದಿನಗೂಲಿ ಮೇಲೆ ಕೆಲಸ ಮಾಡುವ ಕಾರ್ಮಿಕರ ಮೇಲೆ ಇಟ್ಟಿಗೆ ಬಟ್ಟಿ ಮಾಲೀಕ ಹಾಗೂ ಮಗ ಸೇರಿ ಮೂರು ದಿನಗಳ ಕಾಲ ಕೂಡಿಹಾಕಿ ಮನಸ್ಸೋ ಇಚ್ಛೆ ತಳಿಸಿದ್ದಾರೆ...
ಏನಿದು ಘಟನೆ...!
ಸಂಕ್ರಮಣ ಹಿನ್ನಲೆಯಲ್ಲಿ ಊರಿಗೆ ತೆರಳಿ ಜ. 16 ರಂದು ಮರಳಿ ಇಟ್ಟಂಗಿ ಭಟ್ಟಿಗೆ ಬಂದಿದ್ದ ಕಾರ್ಮಿಕರು ತಮ್ಮೆಲ್ಲ ಸಾಮಾನುಗಳನ್ನ ಕೊಂಡೊಯ್ಯಲು ಬಂದಿದ್ದ ಕಾರ್ಮಿಕರನ್ನು ಆಗ ಖೇಮು ರಾಠೋಡ ಹಾಗೂ ಆತನ ಮಗ ಸೇರಿದಂತೆ 15 ಕ್ಕೂ ಅಧಿಕ ಜನರಿಂದ ಹಲ್ಲೆ ನಡೆಸಿ ಮೂರ ದಿನ ಕೂಡಿ ಹಾಕಿ ಪ್ರತಿ ನಿತ್ಯ 15 ನಿಮಿಷಕ್ಕೊಮ್ಮೆ ಹಲ್ಲೆ ಮಾಡಿ, ಕೆಲಸ ಮಾಡಿಸಿ ಮತ್ತೆ ಹಲ್ಲೆ ಮಾಡುತ್ತಿದ್ದರು ಎಂದು ಆರೋಪಿಸಿ ಕಾರ್ಮೀಕರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ
Sign up here to get the latest post directly to your inbox.