ವಿಜಯಪುರ : ವಿಜಯೇಂದ್ರ ವಿರುದ್ದ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ ಶಾಸಕ ಯತ್ನಾಳ...
ಹೌದು ವಿಜಯಪುರ ನಗರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ನವರು ಸಿಎಂ ಆಗಲು ಕಾರಣ ರಮೇಶ ಜಾರಕಿಹೋಳಿ ಅವರು , ನೀವು ಇಷ್ಟೆಲ್ಲ ದುಡ್ಡು ಮಾಡಲು ಕಾರಣ ರಮೇಶ ಜಾರಕಿಹೋಳಿ ಅವರು, ನೀವು ಎಷ್ಟು ದುಡ್ಡು ಮಾಡಿದ್ದೀರಿ ಎಂಬುದು ಜಗತ್ತಿಗೆ ಗೊತ್ತಿದೆ ಎಂದಿದ್ದಾರೆ. ಉಮೇಶ ಎನ್ನುವ ಕಂಡೆಕ್ಟರ್ ಮನೆಯಲ್ಲಿ ಸಾವಿರಾರು ಕೋಟಿ ನಗದು, ಖರೀದಿ ಬಾಂಡ್ ಸಿಗುತ್ತದೆ ಅದು ಯಾರದು. ರಮೇಶ ಜಾರಕಿಹೋಳಿ ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಅವರು ಎಸ್ ಟಿ ನಾಯಕರಿದ್ದಾರೆ, ವಾಲ್ಮಿಕಿ ಜನಾಂಗವರು ನೀರಾವರಿಯಲ್ಲಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದರು, ಅವರನ್ನು ಬಲಿ ಕೊಟ್ಟಿದ್ದು ಯಾರು ವಿಜಯೇಂದ್ರ ಎಂದು ಪ್ರಶ್ನಿಸಿದ ಶಾಸಕ ಯತ್ನಾಳ್ ಬಿಜೆಪಿ ಪಕ್ಷಕ್ಕಾಗಿ ಅನೇಕರು ಹೋರಾಟ ಮಾಡಿದ್ದಾರೆ ಅದೆಷ್ಟೋ ಕಾರ್ಯಕರ್ತರು ಸೈಕಲ್ ಹೊಡೆದು ಹೋರಾಟ ಮಾಡಿದ್ದಾರೆ ಪಕ್ಷಕ್ಕಾಗಿ
ಜಗನ್ನಾಥ್ ರಾವ್ ಜೋಶಿ, ಅನಂತ ಕುಮಾರ ಅವರು, ಬಸವರಾಜ್ ಪಾಟೀಲ್ ಸೇಡಂ ಅವರು ಪ್ಲಾನ್ ಮಾಡಿದ ಪರಿಣಾಮ ಬಿಜೆಪಿ ಕರ್ನಾಟಕದಲ್ಲಿ ಗಟ್ಟಿಯಾಗಿ ನಿಂತಿತು ಒಬ್ಬನೇ ಸೈಕಲ್ ಹೊಡೆದ ಪಕ್ಷ ಅಧಿಕಾರಕ್ಕೆ ತಂದಿಲ್ಲ ಪೂಜ್ಯ ತಂದೆ ಮಾಡಿದ್ದಾರೆ ಅನ್ನಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ...
Sign up here to get the latest post directly to your inbox.