ವಿಜಯಪುರ : ನಗರದಲ್ಲಿ ಇತ್ತಿಚಿಗೆ ಚಿರತೆ ಯೊಗಾಪುರದಲ್ಲಿ ಕಂಡು ಬಂದಿದ್ದು ಮತ್ತು ಅದು ಸಿ.ಸಿ.ಟಿವಿಯಲ್ಲಿ ಸೆರೆಯಾಗಿದ್ದು ನಿಜ..ಆದರೆ ಇಂದು ನಗರದ ಪ್ರಮುಖ ರಸ್ತೆಯಾದ ಬಾಗಲಕೋಟ ಕ್ರಾಸ್ ಅಲ್ಲಿಯ ಖಡ್ಡೆ ಗಲ್ಲಿಯಲ್ಲಿ ಮಹಿಳೆ ಒಬ್ಬರು ತಾನು ಮನೆಯ ಮುಂದೆ ಕುಳಿತಾಗ ಚಿರತೆಯೊಂದನ್ನು ನೋಡಿದ್ದಾಗಿ ಹೇಳಿದ್ದಾರೆ..
ಇದನ್ನು ನಂಬಿದ ಜನ , ಜನ ಮರಳೊ ಜಾತ್ರೆ ಮರಳೊ ಎನ್ನುವ ಹಾಗೆ ಜನಜಂಗುಳಿ ಉಂಟಾಗಿ ಕೇಲವು ವೇಳೆ ವಾಹನಗಳಿಗೆ ಅಡಚಣೆ ಉಂಟಾಯಿತು..ಇನ್ನು ಘಟನಾ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಶೀಲಿಸಿ ಚಿರತೆ ನೋಡಿದಾಗ ಮಹಿಳೆ ಹೇಳಿದ್ದಾರೆ ಅದಕ್ಕೆ ಬಂದು ನೋಡಿದಾಗ ಇಲ್ಲಿ ಯಾವುದೇ ಕುರುಹುಗಳು ದೊರೆತಿಲ್ಲ ಆದರೆ ಜನರು ಸುರಕ್ಷಿತವಾಗಿ ಇರುವದು ಸೂಕ್ತ ನಾವು ಸಹ ಇಂದು ಪೂರ್ತಿ ದಿನ ಗಸ್ತು ಮಾಡುವುದಾಗಿ ತಿಳಿಸಿದ್ದಾರೆ...
Sign up here to get the latest post directly to your inbox.