ವಿಜಯಪುರ : ವಾಣಿಜ್ಯ ಕಟ್ಟಡ/ವಾಣಿಜ್ಯ ಸಂಕೀರ್ಣಕ್ಕೆ Karnataka Public Safety (Measures) Enforcement Act, 2017 ನೇದ್ದರಲ್ಲಿ ಸೂಚಿಸಿದ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಕುರಿತು ವಿಜಯಪುರ ಪೋಲಿಸ್ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ಸರಕಾರ ಕರ್ನಾಟಕ ಸಾರ್ವಜನಿಕ ಸುರಕ್ಷತೆಯ ಅಧಿನಿಯಮ-2017 ನೇದ್ದನ್ನು ಜಾರಿಗೆ ತಂದಿದ್ದು ಅದರ ಅಡಿಯಲ್ಕಿ ಕಟ್ಟಡ/ವಾಣಿಜ್ಯ ಸಂಕೀರ್ಣಗಳಿಗೆ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಹಲವಾರು ಅಂಶಗಳನ್ನು ಸೂಚಿಸಿದೆ..
ಹೌದು ಅದರಲ್ಲಿ ಕಟ್ಟಡ/ವಾಣಿಜ್ಯ ಸಂಕೀರ್ಣದ ಒಳಗೆ ಹಾಗೂ ಹೊರಗಡೆ ಸಂಪೂರ್ಣ ವ್ಯಾಪ್ತಿ ಒಳಪಡುವಂತೆ ಹಗಲು ಮತ್ತು ರಾತ್ರಿ (ದಿನದ 24 ಗಂಟೆ) ದೃಶ್ಯಾವಳಿಗಳು ನಿಚ್ಚಳವಾಗಿ ಸಂಗ್ರಹವಾಗುವಂತಹ ಸಿಸಿ ಕ್ಯಾಮರಾಗಳನ್ನು ಅಳವಡಿಸುವದು. ಹಾಗೂ ಅದು 30 ದಿನದ ದೃಶ್ಯಾವಳಿಗಳ ಸಂಗ್ರಹದ ಸಾಮರ್ಥ್ಯ ಹೊಂದಿರಬೇಕು.ಎರಡನೆಯದಾಗಿ ಕಟ್ಟಡ/ವಾಣಿಜ್ಯ ಸಂಕೀರ್ಣದ ಸುರಕ್ಷತೆ ದೃಷ್ಟಿಯಿಂದ ಎಷ್ಟು ಜನ ಸೆಕ್ಯೂರಿಟಿ ಗಾರ್ಡಗಳನ್ನು ನೇಮಿಸಿದ ಹಾಗೂ ಯಾವ ಏಜೆನ್ಸಿಯಿಂದ ನೇಮಕ ಮಾಡಿದ ಬಗ್ಗೆ ಮಾಹಿತಿ ಒದಗಿಸುವದು..ಅದಲ್ಲದೇ
ಕಟ್ಟಡ/ವಾಣಿಜ್ಯ ಸಂಕೀರ್ಣದ ನೀಲನಕ್ಷೆಯನ್ನು ಪೂರೈಸುವದು ಅದರಲ್ಲಿ ಸಿ.ಸಿ ಕ್ಯಾಮರಾಗಳನ್ನು ಆಳವಡಿಸಿದ ಸ್ಥಳ,ಎಲೆಕ್ಟಿಕಲ್ ಬೋರ್ಡ ಅಳವಡಿಸಿದ ಸ್ಥಳ, ತುರ್ತು ನಿರ್ಗಮನದ ಸ್ಥಳಗಳ ಮಾಹಿತಿಯನ್ನು ಗುರುತಿಸಿ ಪೂರೈಸುವುದು ಇದೆ ಅದಲ್ಲದೇ ಪೋಲಿಸ್ ಇಲಾಖೆಯ ವತಿಯಿಂದ ಕಟ್ಟಡದ ಮಾಲಿಕರಿಗೆ Karnataka Public Safety (Measures) Enforcement Act, 2017 ಅಂಶಗಳನ್ನು ಪಾಲಿಸಿ ನೋಟಿಸ್ ಮುಟ್ಟಿದ 02 ದಿನಗಳಲ್ಲಿ ಮಾಹಿತಿಯನ್ನು ಪೊಲೀಸ್ ಠಾಣೆಗೆ ಪೂರೈಸಬೇಕಾಗಿದೆ ಎಂದು ತಿಳಿಸಲಾಗಿದೆ. ಅದಲ್ಲದೇ ಮಾಹಿತಿಯನ್ನು ಪೂರೈಸದೆ ಇದ್ದಲ್ಲಿ ಸೂಕ್ತ ಕಾನೂನು ಕ್ರಮ ಜರೂಗಿಸಲಾಗುವದು ಎಂದು ತಿಳಿಸಲಾಗಿ ನೋಟಿಸ್ ನೀಡಲಾಗಿದೆ...
Sign up here to get the latest post directly to your inbox.