ಕನಕದಾಸರ ಜಯಂತಿ ಆಚರಣೆ ವೇಳೆ ಸಚಿವರು , ಶಾಸಕರು ಗೈರು ಕುರುಬ ಸಮಾಜದ ಮುಖಂಡರಿಂದ ಆಕ್ರೋಶ..!

Mon, Nov 18, 2024

ವಿಜಯಪುರ : ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕನಕದಾಸರ ಜಯಂತಿಗೆ ಸಚಿವ, ಶಾಸಕರು ಗೈರಾಗಿದ್ದರಿಂದ ಕುರುಬ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ...


ಹೌದು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ  ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ವಿಜಯಪುರ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್, ನಗರ ಶಾಸಕ ಯತ್ನಾಳ್ ಹಾಗೂ ಗೈರಾದ ಅಧಿಕಾರಿಗಳ ವಿರುದ್ಧ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಎದ್ದು ಹೊರಗೆ ನಡೆದಿದ್ದಾರೆ, ಕಾರ್ಯಕ್ರಮದದಲ್ಲಿ ಭಾಷಣ ನಡೆದ ವೇಳೆ ಆಕ್ರೋಶ ವ್ಯಕ್ತಿಪಡಿಸಿದ ಸಮಾಜದ ಮುಖಂಡರು ಈ ವೇಳೆ ವಿವಿಧ ಸಂಘಟನೆಗಳ ಮುಖಂಡರಿಂದಲೂ

ಆಕ್ರೋಶ ವ್ಯಕ್ತವಾಗಿದ್ದು ಸಮಾಧಾನಪಡಿಸಲು ಪೊಲೀಸರು, ಹಾಗೂ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ್ ಬಬಲೇಶ್ವರ ಹರಸಾಹಸ ಪಡುವಂತಾಯಿತು, ಸರ್ಕಾರಿ ಜಯಂತಿ ಕಾರ್ಯಕ್ರಮಗಳಿಗೆ ಸಚಿವರು, ಶಾಸಕರು ಯಾಕೆ ಬರಲ್ಲ, ವಿಜಯಪುರ ನಗರ ಶಾಸಕ ಯತ್ನಾಳ್ ಆಗಮಿಸಬೇಕಿತ್ತು ಅವರು ಬಂದಿಲ್ಲ, ಸಮಾಜಕ್ಕೆ ಗೌರವ ಕೊಟ್ಟಿಲ್ಲ ಶಾಸಕರು ಸಚಿವರು ಸಂಸದರು ಹಾಗೂ ಜಿಲ್ಲಾಧಿಕಾರಿ,ಎಸ್ಪಿಯವರೂ ಕನಕದಾಸ ಜಯಂತಿಗೆ ಬಂದಿಲ್ಲ ಕಾರ್ಯಕ್ರಮ ಬಹಿಷ್ಕರಿಸಿ ಸಭಾಂಗಣದಿಂದ ಮುಖಂಡರು ಹೊರನಡೆದಿದ್ದಾರೆ,  ಬೆರಳೆಣಿಕೆಯಷ್ಟು ಜನರ ಮಧ್ಯೆ ನಡೆದ ಕಾರ್ಯಕ್ರಮ ನಡೆದಿದ್ದು ಶಿಷ್ಟಾಚಾರದ ಪ್ರಕಾರ ಜನಪ್ರತಿನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿರುತ್ತಾರೆ ಶಾಸಕರು ಆಯಾ ತಾಲೂಕು ಮಟ್ಟದ ಕನಕದಾಸರ ಜಯಂತಿಯಲ್ಲಿ ಭಾಗಿಯಾಗಿರುತ್ತಾರೆ ಎಂದು ಸಮಜಾಯಿಷಿ ನೀಡಿ ಮನವೊಲಿಸಲು ಪ್ರಯತ್ನಿಸಿದ ಸಂಗಮೇಶ್ ಬಬಲೇಶ್ವರ ಈ ವೇಳೆಯೂ ಶಾಸಕರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖಂಡರು ಎಲ್ಲಾ ಜಯಂತಿಗಳಿಗೂ ಶಾಸಕರು , ಸಚಿವರು ಬರೋದಿಲ್ಲ ಶಾಸಕರು ಸತ್ತಿದ್ದಾರೆ ಅಂತ ಹಾಕಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ 


ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿಪಂ ಸಿಇಒ ರಿಷಿ ಆನಂದ, ಹೆಚ್ಚುವರಿ ಎಸ್ಪಿ ಶಂಕರ್ ಮಾರಿಹಾಳ.ಪಾಲಿಕೆ ಸದಸ್ಯರು ಭಾಗಿಯಾಗಿದ್ದರು...

Like our news?