ಹುತಾತ್ಮರಾದ ವೀರ ಪೋಲಿಸರ ಸ್ಮರಣೆ ; ಹುತಾತ್ಮ ದಿನ ಆಚರಣೆ..!

Mon, Oct 21, 2024

ವಿಜಯಪುರ : ವಿಜಯಪುರ ನಗರದ ಪೋಲೀಸ್ ಪರೇಡ್ ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಹುತಾತ್ಮ ಪೋಲಿಸರಿಗೆ ಪುಷ್ಪನಮನ ಸಲ್ಲಿಸಿ, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.


ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ನ್ಯಾಯಾಧೀಶರಾದ ಶಿವಾಜಿ ಅನಂತ ನಲವಡೆ, ವಿಜಯಪುರ ಜಿಲ್ಲಾ ಪ್ರಭಾರ ಪೋಲೀಸ್ ವರಿಷ್ಟಾಧಿಕಾರಿ ಪ್ರಸನ್ನ ಕುಮಾರ ದೇಸಾಯಿ , ಹೆಚ್ಚುವರಿ ಪೋಲೀಸ್ ವರಿಷ್ಟಾಧಿಕಾರಿ ಶಂಕರ ಮಾರಿಹಾಳ, ಎ ಎಸ್ ಪಿ ರಾಮನಗೌಡ ಹಟ್ಟಿ ಅವರು ಸೇರಿದಂತೆ ಪೋಲಿಸ್ ಸಿಬ್ಬಂದಿಗಳು, ಪೋಲಿಸ್ ಕುಟುಂಬಸ್ಥರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು...

Like our news?