ರಾಹುಲ್ ಗಾಂಧಿಗೆ ಗೊತ್ತಿಲ್ಲ ತಾನು ಯಾವ ಜಾತಿಯಲ್ಲಿ ಹುಟ್ಟಿದ್ದೇನೆ ಅನ್ನೋದು - ಶಾಸಕ ಬಸನಗೌಡ ಪಾಟೀಲ್ ಯತ್ನಾಳ್..!

Sat, Sep 14, 2024

ವಿಜಯಪುರ : ರಾಹುಲ್ ಗಾಂಧಿ ಯಾವ ಜಾತಿಯಲ್ಲಿ ಹುಟ್ಟಿದ್ದಾನೆ ಅನ್ನೊದು ಮೊದಲು ತನಿಕೆಯೋಗಬೇಕಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ...


ಹೌದು ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ್ , ಮೀಸಲಾತಿ ತೆಗೆಯುತ್ತೇವೆ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ ಇದನ್ನು ದಲಿತರು ವಿಚಾರ ಮಾಡಬೇಕು , ಮೊದಲು ಬಿಜೆಪಿ ಮೇಲೆ ಅಪವಾದ ಕೊಡುತ್ತಿದ್ದರು ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆದು ಹಾಕ್ತಾರೆ ದಲಿತರ ಹಕ್ಕು ಕಸಿದುಕೊಳ್ತಾರೆ, ಸಂವಿಧಾನ ಬದಲಾವಣೆ ಆಗುತ್ತೆ ಅಂತಿದ್ರು ಆದರೆ ನರೇಂದ್ರ ಮೋದಿ ಅವರು ಬಂದು ಹತ್ತು ವರ್ಷ ಆಯ್ತು ಹಿಂದೆ ಆರುವರೆ ವರ್ಷ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತ ಇತ್ತು ನಾವೇನಾದರೂ ಸಂವಿಧಾನಕ್ಕೆ ಟಚ್ ಮಾಡಿದ್ವಾ. ಅಂಬೇಡ್ಕರ್ ಹುಟ್ಟಿದ ಮನೆ ಹಾಗೂ ದೆಹಲಿಯಲ್ಲಿ ಕೊನೆಯ ದಿನ ಕಳೆದ ಸ್ಥಳ ಸ್ಮಾರಕ ಮಾಡಿದ್ದು ನರೇಂದ್ರ ಮೋದಿ ಎಂದರು.

ಅಮೇರಿಕಾಕ್ಕೆ ಹೋಗಿ ದೇಶ ದ್ರೋಹಿ ಹೇಳಿಕೆ ಕೊಡುತ್ತಿದ್ದಾರೆ ಅಂತ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ ಶಾಸಕ ಯತ್ನಾಳ್ ರಾಹುಲ್ ಗಾಂಧಿ ಹೇಳ್ತಾನೆ ಜಾತಿ ಸಮೀಕ್ಷೆ ಮಾಡ್ತೇವೆ ಅಂತಿದ್ದಾರೆ. ರಾಹುಲ್ ಗಾಂಧಿಗೆ ಗೊತ್ತಿಲ್ಲ ತಾನು ಯಾವ ಜಾತಿಯಲ್ಲಿ ಹುಟ್ಟಿದ್ದೇನೆ ಅನ್ನೋದು ಮುಸ್ಲಿಮರಿಗೆ ಹುಟ್ಟಿದ್ದಾನೋ, ಕ್ರಿಸ್ತರಿಗೆ ಹುಟ್ಟಿದಾನೋ ಅನ್ನೋದು ತನಿಖೆ ಆಗಬೇಕಿದೆ ಜನಿವಾರ ಹಾಕಿದ ಬ್ರಾಹ್ಮಣ ಅಂತ ತಿಳಿದು ಕೊಂಡಿದ್ದಾನೆ ಅವರ ಅಪ್ಪ ಬೇರೆ ಅಪ್ಪ ಬೇರೆ ಅವ್ವ ಇಟಲಿಯಾಕಿ, ಅಪ್ಪ ಮೊಘಲರ ಕೈಯಲ್ಲಿ ಕೆಲ್ಸ ಮಾಡಿದವ ಮರಿ ಮೊಮ್ಮಗ ಕಂಟ್ರಿ ಪಿಸ್ತೂಲ್ ಇದ್ದಂಗೆ ಎಂದಿದ್ದಾರೆ...

Like our news?