ವಿಜಯಪುರ : ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ...
ಹೌದು ಶನಿವಾರದ ದಿನದಂದು ದೇವರಹಿಪ್ಪರಗಿ ತಾಲೂಕಿನ ಬಿ.ಬಿ.ಇಂಗಳಗಿ ಗ್ರಾಮದಲ್ಲಿ ಘನ ಗುರುಸಿದ್ದೇಶ್ವರ ಜಾತ್ರೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ರಥೋತ್ಸವದ ಗಾಲಿಗೆ ವ್ಯಕ್ತಿಯೋರ್ವ ಸಿಲುಕಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಗ್ರಾಮದಲ್ಲಿ ಶನಿವಾರ ಸಾಯಂಕಾಲ 6:00 ಸಮಯಕ್ಕೆ ಘನ ಗುರುಸಿದ್ದೇಶ್ವರ ಜಾತ್ರೆಯ ರಥೋತ್ಸವದ ವೇಳೆ ಗ್ರಾಮದ ದೇವೇಂದ್ರ ಮನೋಹರ ಬಡಿಗೇರ (24) ರಥದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದು, ತೇರು ಎಳೆಯುವ ವೇಳೆ ಮೈ ಮೇಲೆ ರಥದ ಚಕ್ರ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದರು. ಆದ್ರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.
ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...
Sign up here to get the latest post directly to your inbox.