ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಲಭ್ಯವಾಗುತ್ತಿರುವ ಫೋಟೋ ವೈರಲ್ ಆಗುತ್ತಿದ್ದಂತೆ ಗೃಹ ಸಚಿವ ಜಿ ಪರಮೇಶ್ವರ ಅವರು 7 ಮಂದಿ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚಿಸಿ ಆದೇಶಿಸಿದ್ದಾರೆ.
ಇಂದು ಶರಣಬಸವ ಅಮಿನಗಡ್, ಪ್ರಭು.S. ಕಂಡೆ , L.S. ತಿಪ್ಪೇಸ್ವಾಮಿ, ಶ್ರೀಕಾಂತ ತಳ್ವಾರ್, ವೆಂಕಪ್ಪ, ಬಸಪ್ಪ ಮತ್ತು ಸಂಪತ್ ಆಮಾನತದ ಅಧಿಕಾರಿಗಳಾಗಿದ್ದರೆ , ಇನ್ನೂ ಆಂತರಿಕ ತನಿಖೆಯನ್ನು ಮಾಲಿನಿ ಯೊಂದಿಗೆ ಆನಂದ್ ರೆಡ್ಡಿ ಮತ್ತು ಸೋಮಶೇಖರ್ ಅವರನ್ನು ನೇಮಿಸಲಾಗಿರುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
“ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಿರ್ದಾಕ್ಷಿಣ್ಯವಾಗಿ ಅಗತ್ಯ ಶಿಸ್ತು ಕ್ರಮ ಜರುಗಿಸಲಾಗುವುದು” ಎಂದು ಹೇಳಿದರು...
Sign up here to get the latest post directly to your inbox.