ಕಾರ್ ಚಾಲಕನ ಮೇಲೆ ಟ್ರಾಫಿಕ್ ಪಿಎಸ್ಐ ಹಲ್ಲೆ ವಿಡಿಯೋ ವೈರಲ್..!

Fri, Aug 16, 2024

ವಿಜಯಪುರ : ಕಾರು ಚಾಲಕನಿಗೆ ಟ್ರಾಫಿಕ್ ಪಿಎಸ್‌ಐ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ...


ಹೌದು ವಿಜಯಪುರ ನಗರದ ಬೇಗಂ ತಲಾಬ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುವ ಸಮಯದಲ್ಲಿ ಟ್ರಾಫಿಕ್ ಪಿಎಸ್‌ಐ ನಿಖಿಲ್ ಕಾಂಬ್ಳೆಯಿಂದ ಕಾರು ಚಾಲಕನ ಮೇಲೆ ಹಲ್ಲೆ ನಡೆದಿದ್ದು ಕಾರು ಚಾಲಕನ ಹೆಸರು ಮಾಹಿತಿ ಲಭ್ಯವಾಗಿಲ್ಲ, ಒಂದು ಸಾವಿರ ದಂಡ ಕಟ್ಟುವಂತೆ ಪಿಎಸ್‌ಐ ನಿಖಿಲ್‌ ಕಾಂಬ್ಳೆ ತಿಳಿಸಿದಾಗ ಇಬ್ಬರ ಮದ್ಯ ವಾಗ್ವಾದ ನಡೆದು ತಾಳ್ಮೆ ಕಳೆದುಕೊಂಡ ಪಿಎಸ್ಐ ನಿಖಿಲ್ ಕಾರು ಚಾಲಕನಿಗೆ ಅವಾಚ್ಯ ಶಬ್ಧದಿಂದ ನಿಂದಿಸಿ ಹಲ್ಲೆಗೈದಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಕತ್ ವೈರಲ್ ಆಗಿದ್ದು ನೆಟ್ಟಿಗರು ಟ್ರಾಫಿಕ್ ಪಿಎಸ್ಐ ಕೃತ್ಯಕ್ಕೆ ಛೀಮಾರಿ ಹಾಕಿದ್ದಾರೆ...

Like our news?