ವಿಜಯಪುರ : ವಕೀಲ ರವಿ ಮೇಲಿನಕೇರಿ ಭೀಕರವಾಗಿ ಕೊಲೆಯಾದ ಘಟನೆಯಲ್ಲಿ ಐದು ಜನ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ವಿಜಯಪುರ ಪೋಲೀಸ್ ವರಿಷ್ಠಾಧಿಕಾರಿ ಋಷಿಕೇಸ್ ಸೋನವಾಣೆ ಮಾಹಿತಿ ನೀಡಿದರು.
ಹೌದು ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಪೋಲೀಸ್ ವರಿಷ್ಠಾಧಿಕಾರಿಗಳು ವಕೀಲ ರವಿ ಮೇಲಿನಕೇರಿನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಇನ್ನು ರವಿಯ ಬೈಕ್‌ಗೆ ಕಾರು ಡಿಕ್ಕಿ ಹೊಡಿಸಿ ಬರೋಬ್ಬರಿಗೆ ಎರಡು ಕಿಲೊಮೀಟರ್ ಎಳೆದುಕೊಂಡು ಆರೋಪಿಗಳು ಹೋಗಿದ್ದರು. ಪ್ರಕರಣದಲ್ಲಿ ಪ್ರಮುಖ ಆರೋಪಿ ತುಳಸಿರಾಮ ಹರಿಜನ, ಅಲೆಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರಿಘೇಶ ಉಳ್ಳಾಗಡ್ಡಿ ಬಂಧಿತ ಆರೋಪಿಗಳಾಗಿದ್ದು . ಪ್ರಮುಖ ಆರೋಪಿ ಹರಿಜನ ಹಾಗೂ ಹತ್ಯೆಯಾಗಿರುವ ವಕೀಲ ರವಿ ಮಧ್ಯೆ ಜಗಳವಾಗಿತ್ತು. ಅದಕ್ಕಾಗಿ ಅಪಘಾತದಲ್ಲಿ ರವಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದರು...
Sign up here to get the latest post directly to your inbox.