ವೆಬ್ ಸೀರಿಸ್ ನೋಡಿ ಖೋಟಾ ನೋಟು ಪ್ರಿಂಟ್ ; ಹೆಡೆಮುರಿ ಕಟ್ಟಿದ ಪೋಲಿಸರು..!

Wed, Jul 03, 2024

ಬೆಳಗಾವಿಫರ್ಜಿ ಹಿಂದಿ ವೆಬ್ ಸೀರಿಜ್ ನೋಡಿ ಗಡಿ ಭಾಗದಲ್ಲಿ ಖೋಟಾ ನೋಟು ಪ್ರಿಂಟ್ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ನು ಪೋಲಿಸರು ಹೆಡೆಮುರಿ ಕಟ್ಟಿದ್ದಾರೆ...

ಹೌದು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಆಕ್ಟಿವ್ ಆಗಿದ್ದ ಖರ್ತನಾಕ್ ಗ್ಯಾಂಗ್ ಬಳಿಯಿದ್ದ 33 ಲಕ್ಷ 96 ಸಾವಿರ ಖೋಟಾ ನೋಟು ಜಪ್ತಿ ಮಾಡುವಲ್ಲಿ ಬೆಳಗಾವಿ ಪೋಲಿಸರು ಯಶಸ್ವಿಯಾಗಿದ್ದಾರೆ...


ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಬಾವಿ ಗ್ರಾಮದ ಅನ್ವರ್ ಯಾದವಾಡ, ಮಹಾಲಿಂಗಪುರ ಗ್ರಾಮದ ಸದ್ದಾಂ ಯಡಳ್ಳಿ, ರವಿ ಹ್ಯಾಗಾಡಿ, ದುಂಡಪ್ಪ ಒಣಶೆಣವಿ, ವಿಠ್ಠಲ್ ಹೊಸತೋಟ, ಮಲ್ಲಪ್ಪ ಕುಂದಾಳಿ ಬಂಧಿತ ಆರೋಪಿಗಳಾಗಿದ್ದಾರೆ.

100 ರೂಪಾಯಿ, 500 ರೂಪಾಯಿ ಮುಖ ಬೆಲೆಯ ಖೋಟಾ ನೋಟನ್ನು ಒಂದು ಲಕ್ಷ ಕ್ಯಾಶ್ ಗೆ ಐದು ಲಕ್ಷ ಖೋಟಾ ನೋಟು ಕೊಡ್ತಿದ್ದ ಗ್ಯಾಂಗ್ ಇದಾಗಿದ್ದು , ಒಟ್ಟು ಆರು ಜನ ಆರೋಪಿಗಳನ್ನು ಬಂಧಿಸಿದ್ದು ಬಂಧೀತರಿಂದ ಖೋಟಾ ನೋಟು, ಪ್ರಿಂಟರ್ ಮಷಿನ್, ಸ್ಕ್ರೀನಿಂಗ್ ಬೋರ್ಡ್, ಪೆಂಟ್, ಪ್ರಿಂಟಿಂಗ್ ಪೇಪರ್, ಆರು ಮೊಬೈಲ್ ಜಪ್ತಿ ಮಾಡಲಾಗಿದೆ,

ಈ ವೇಳೆ 100 ಮುಖಬೆಲೆಯ 305 ಹಾಗೂ 500 ಮುಖಬೆಲೆಯ 6,792 ಖೋಟಾ ನೋಟು ಹಾಗೂ ಬಂಧಿತರಿಂದ ಸುಮಾರು 5,23,900 ರೂ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ...

Like our news?