ಊರಲ್ಲಿ ಮರ್ಯಾದೆ ಕೊಡುತ್ತಿಲ್ಲ ಎಂದು ಸ್ವತಃ ನಕಲಿ ಐಬಿ ಅಧಿಕಾರಿಯಾಗಿ ಪೋಸ್ ನೀಡುತ್ತಿದ್ದ ಯುವಕ ಅರೆಸ್ಟ್..!

Sat, May 25, 2024

ಬಾಗಲಕೋಟೆ : ಊರಲ್ಲಿ ಜನರು ಮರ್ಯಾದೆ ಕೊಡುತ್ತಿಲ್ಲ ಎಂದು ನಕಲಿ ಐಬಿ ಅಧಿಕಾರಿಯಾಗಿ ಪೋಸ್ ಕೊಡುತ್ತಿದ್ದ ಯುವಕ ಇದೀಗ ಪೋಲಿಸರ ಅತಿಥಿಯಾಗಿದ್ದಾನೆ...


ಹೌದು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ ಲಕ್ಕಪಗೋಳ ಇದೀಗ ಪೋಲಿಸರ ಅತಿಥಿಯಾಗಿದ್ದಾನೆ ಊರಿನಲ್ಲಿ ತನಗೆ ಯಾರೂ ಗೌರವ ನೀಡುತ್ತಿಲ್ಲ ಎಂದು ಇಂಟೆಲಿಜೆನ್ಸಿ ಬ್ಯುರೋ ಅಧಿಕಾರಿಗಳ ತರಹ ಟಾಯ್ ಗನ್ ವಾಕಿಟಾಕಿ ಬಳಸುತ್ತಾ ತಾನೋಬ್ಬ ಐಬಿ ಅಧಿಕಾರಿಯಾಗಿ ಓಡಾಡುತ್ತಾ ನಕಲಿ ಐಡಿ ತಯಾರಿಸಿದ್ದ ಸಂಗಮೇಶ ಲಕ್ಕಪಗೋಳ ಇದೀಗ ಪೋಲಿಸರ ಅತಿಥಿಯಾಗಿದ್ದಾನೆ , ಸದ್ಯ ಆರೋಪಿ ಸಂಗಮೇಶನನ್ನ ಬಂಧಿಸಿರುವ ಬನಹಟ್ಟಿ ಪೋಲಿಸರು ತನಿಖೆ ಮುಂದುವರೆಸಿದ್ದಾರೆ...

Like our news?