ವಿಜಯಪುರ : ನಿನ್ನೆಯ ದಿನ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಎರಡು ವರ್ಷದ ಮಗುವಿನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದ್ದು , ಸತತ 20 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಎರಡು ವರ್ಷದ ಮಗು ಸಾತ್ವಿಕ ಸಾವನ್ನೇ ಗೆದ್ದು ಬಂದಿದ್ದಾನೆ...
ಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸುಮಾರು 20 ಅಡಿ ಕೊಳವೆ ಬಾವಿಯಲ್ಲಿ ಬಿದ್ದ ಎರಡು ವರ್ಷದ ಮಗುವಿನ ರಕ್ಷಣೆಯಲ್ಲಿ ತೊಡಗಿದ್ದ ರಾಜ್ಯ ರಕ್ಷಣಾ ತಂಡ ಮತ್ತು ರಾಷ್ಟ್ರೀಯ ರಕ್ಷಣಾ ತಂಡ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದು , ಸತತ 20 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಹೊರ ತೆಗೆಯಲಾಗಿದ್ದು ಮಗುವನ್ನು ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ...
ಘಟನೆ ವಿವರ
ವಿಜಯಪುರ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶಂಕ್ರಪ್ಪ ಮುಜಗೊಂಡ ಎಂಬುವವರು ಜಮೀನಿನಲ್ಲಿ ಒಂದೆರಡು ದಿನದ ಹಿಂದೆ ಕೊಳವೆ ಬಾವಿ ಕೊರೆಸಿದ್ದರು ಆದರೆ ನೀರು ಬರಲಿಲ್ಲವೆಂದು ಕೊಳವೆ ಬಾಯಿ ಹಾಗೆ ಮುಚ್ಚಳ ಮುಚ್ಚದೆ ಬಿಟ್ಟಿರುವ ಕಾರಣ ಶಂಕ್ರಪ್ಪ ಮುಜಗೊಂಡರವರ ಮೊಮ್ಮಗ ಸಾತ್ವಿಕ ಆಟವಾಡುತ್ತಾ ಹೋಗಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ...
Sign up here to get the latest post directly to your inbox.