ನೀರಿಗಾಗಿ ಮೊಬೈಲ್ ಟವರ್ ಏರಿದ ಯುವಕ..!

Tue, Mar 19, 2024

ಹಿಂದೆ ಗುಟ್ಕಾಗಾಗಿ ಇಂದು ನೀರಿಗಾಗಿ ಮೊಬೈಲ್ ಟವರ್ ಏರಿದ ಯುವಕ..!


ವಿಜಯಪುರ : ಯುವಕನೊರ್ವ ನೀರಿಗಾಗಿ ಮೊಬೈಲ್ ಟವರ್ ಏರಿ ಕೆಲಕಾಲ ಆತಂಕ ಸೃಷ್ಟಿಸಿರುವ ಘಟನೆ  ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ...


ತೆಗ್ಗಿಹಳ್ಳಿ ಗ್ರಾಮದ ಯುವಕ ಸತೀಶ್ ಚಂದ್ರಶೇಖರ್ ಕಡಣಿ ಗ್ರಾಮದಲ್ಲಿ ನೀರಿನ ಸಮಸ್ಯೆ ಕುರಿತು ಪಿಡಿಒ ಹಾಗೂ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿದಿಲ್ಲ ಎಂದು ಆರೋಪಿಸಿ ಸುಮಾರು 250 ಫೂಟ್ ಎತ್ತರದ ಟವರ್ ಹತ್ತಿ ತುದಿಯಲ್ಲಿ ಕುಳಿತು ಆತಂಕ ಸೃಷ್ಟಿಸಿದ್ದ ಯುವಕನನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಯುವಕನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ, ಈ ಹಿಂದೆಯೂ ಸಹ ಸತೀಶ್  ಗುಟ್ಕಾಗಾಗಿ ಸಿಂದಗಿ ಮತ್ತು ಆಲಮೇಲನಲ್ಲಿ ಟವರ್ ಏರಿದ್ದ...

Like our news?