The rameshwaram cafe ಪ್ರಕರಣ ; ಸಚಿವ ಎಂ.ಬಿ.ಪಾಟೀಲ್ ಫಸ್ಟ್ ರಿಯಾಕ್ಷನ್..!

Sat, Mar 02, 2024

ವಿಜಯಪುರ : ಆರೋಪಿಗಳು ಯಾರೆ ಆಗಿರಲಿ , ಯಾವುದೇ ಧರ್ಮದವರೆ ಆಗಿರಲಿ ಎನ್ಐಎ ಹಾಗೂ ರಾಜ್ಯ ಸರ್ಕಾರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ...


ಹೌದು ಇಂದು ವಿಜಯಪುರ ನಗರದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ದಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ ಎಂಟು ಜನರಿಗೆ ಗಾಯಗಳಾಗಿದ್ದು ಇಂತಹ ಪ್ರಕರಣವನ್ನು ಎನ್ಐಎ , ರಾಜ್ಯ ಸರ್ಕಾರ ಎಲ್ಲಾ ರೀತಿಯಲ್ಲೂ ತನಿಖೆ ಮಾಡಿ ಇಂತಹ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದರು , ಇಂತಹ ಪ್ರಕರಣಗಳಲ್ಲಿ ರಾಜಕಾರಣ ಮಾಡಬಾರದು ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು ದೇಶದ ರಕ್ಷಣೆ , ದೇಶದ ಹಿತಾಸಕ್ತಿ ಅದು ರಾಜಕೀಯ ಪಕ್ಷಗಳಿಗಿಂತ ಮೀರಿದ್ದು ನಮ್ಮ ದೇಶ , ನಮ್ಮ ದ್ವಜ, ನಮ್ಮ ರಾಷ್ಟ್ರ ಬಹಳ ಮುಖ್ಯ ಎಂದು ತಿಳಿಸಿದರು...

Like our news?