ನವೆಂಬರ್ 20 ರಂದು ರೈತರ ಬೃಹತ್ ಪ್ರತಿಭಟನೆ..!

Thu, Nov 16, 2023

ಹುಬ್ಬಳ್ಳಿ : ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ನವೆಂಬರ್ ೨೦ ರಂದು ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಬೃಹತ್ ರೈತರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ರಾಜ್ಯಾಧ್ಯಕ್ಷರಾದ ವಾಸುದೇವ ಮೇಟಿ ತಿಳಿಸಿದ್ದಾರೆ.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧೆಡೆ ರೈತರು ಆಗಮಿಸಲಿದ್ದು, ಅಂದು ಬೆ. ೧೦.೩೦ ರಂದು ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಡೊಳ್ಳು, ಮೇಳದೊಂದಿಗೆ  ಚೆನ್ನಮ್ಮ ವೃತ್ತದವರೆಗೆ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು.

ರಾಜ್ಯಾದ್ಯಂತ ಬರವಿದ್ದು ರೈತರ ಸಾಲಮನ್ನಾ ಹಾಗೂ ಬೆಳೆ ಪರಿಹಾರ, ಬೆಳೆವಿಮಾ, ರೈತರ ಬೆಳೆಗಳಿಗೆ ಕಾನೂನಾತ್ಮಕ ದರ ನಿಗದಿ ಮಾಡಬೇಕು,  ಬೆಣ್ಣಿಹಳ್ಳ ಯೋಜನೆಯ  ನೀರನ್ನು ರೈತರಿಗೆ ಸದುಪಯೋಗವಾಗುವಂತೆ ಜಾರಿಮಾಡುವುದು, ಕೃಷ್ಣಾ ನದಿಗೆ ಆಲಮಟ್ಟಿ ಡ್ಯಾಂ ಜಲಾಶಯ ೫೧೯ ರಿಂದ ೫೨೪, ೫೨೬ ಕ್ಕೆ ಎತ್ತರಿಸಲು ಸರ್ಕಾರ ಮುಂದಾಗಬೇಕು, ಸತತವಾಗಿ ೧೨ ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಈಡೇರಿಕೆಗೆ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಧಾರವಾಡ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಕುನ್ನೂರ, ಅನ್ನಪೂರ್ಣ ಪಾಟೀಲ್,    ಬಸವರಾಜ್ ಬೇವಿನಕಟ್ಟಿ, ಬಿ‌.ಎಸ್. ಬೆಳ್ಳಿಗಟ್ಟಿ, ವಿ.ಎಸ್. ಕೆಂಚಪ್ಪಗೌಡ್ರ ಉಪಸ್ಥಿತರಿದ್ದರು.

Like our news?