ಲೋಕಸಭಾ ಚುನಾವಣೆಗೆ ಯಡಿಯೂರಪ್ಪರನ್ನು ಬಳಸಿಕೊಳ್ಳಲು ವಿಜಯೇಂದ್ರಗೆ ರಾಜ್ಯಾಧ್ಯಕ್ಷರ ಪಟ್ಟ..!

Thu, Nov 16, 2023

ವಿಜಯಪುರ : ಲೋಕಸಭಾ ಚುನಾವಣೆಗೆ ಯಡಿಯೂರಪ್ಪರನ್ನು ಬಳಸಿಕೊಳ್ಳಲು ವಿಜಯೇಂದ್ರಗೆ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ...


ಹೌದು ಇಂದು ವಿಜಯಪುರ ನಗರದ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವಿಜಯೇಂದ್ರ ಅವರನ್ನ ಅಧ್ಯಕ್ಷ ಮಾಡಲು ಹಿಂದೆ ಯಡಿಯೂರಪ್ಪ ಉಪಯೋಗಿಸಿಕೊಳ್ಳಲು ವಿಜಯೇಂದ್ರ ಅವರನ್ನ ನೇಮಕ ಮಾಡಿದ್ದಾರೆ , ಯಾಕಂದ್ರೆ ವಿಧಾನ ಸಭೆ ಚುನಾವಣೆಯಲ್ಲಿ ಅರ್ಥವಾಗಿದೆ ಇವತ್ತು ಲಿಂಗಾಯತ ಮತಗಳು ಬಿಜೆಪಿಗೆ ಕೈ ಬಿಟ್ಟಿದ್ದಾವೆ ಹೀಗಾಗಿ ಅನಿವಾರ್ಯವಾಗಿ ಯಡಿಯೂರಪ್ಪ ಅವರನ್ನು ಬೆಳೆಸಿಕೊಳ್ಳಬೇಕು ಲೋಕಸಭೆ ಚುನಾವಣೆ ಮೋದಿ, ಅಮಿತ್ ಶಾ ಅವರದಿದೆ ಅವರ ಬುಡಕ್ಕೆ ಬೆಂಕಿ ಹೊತ್ತಿಕೊಂಡಿದೆ ಹಿಂಗಾಗಿ ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲು ಮಾಡಿದ್ದಾರೆ , ಇದುವೇನು ಬಹಳ ದಿನ ಏನು ಇರಲ್ಲ , ಮೊನ್ನೆ ಅಷ್ಟೇ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ ಮೂರು ವರ್ಷ ಅಷ್ಟೇ ಅಂತ ಮುಂದಿನ ವಿಧಾನಸಭೆ ಚುನಾವಣೆಗೆ ಇವರು ಇರಲ್ಲ ಅಂತ ಅಂದ್ರೆ ಯಡಿಯೂರಪ್ಪ ಅವರನ್ನು ಯಾವಾಗ ಬೇಕಾದರೂ ಉಪಯೋಗಿಸಿಕೊಳ್ಳಬಹುದು , ಕೈ ಬಿಡುವುದು ಆ ಒಂದು ಉದ್ದೇಶಕ್ಕೆ ಮಾಡಿದ್ದಾರೆ ಇದು ಯಾವುದು ನಡಿಯಲ್ಲ , ಇಂತಹ ಉದ್ದೇಶಕ್ಕೆ ಲಿಂಗಾಯತರು ಬಲಿಯಾಗುವುದಿಲ್ಲ ಎಂದು ಟಾಂಗ್ ನೀಡಿದರು...

Like our news?