ವಿಜಯಪುರ: ಉಪ್ಪು ತಿಂದವ ನೀರು ಕುಡಿಯಲೇ ಬೇಕು. ತಪ್ಪು ಮಾಡಿದವ ಶಿಕ್ಷೆ ಅನುಭವಿಸಲು ಬೇಕು. ಈಗ ನಡೆದಿರುವುದು ಅದೆ. ಅದೇನು ತಪ್ಪು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೆಲ್ಸ್.
ಕಾನೂನಿಗೆ ಯಾರೂ ಹೊರತಲ್ಲ ಅದು ಪತ್ರಕರ್ತರು ಸೇರಿದಂತೆ. ಕಳೆದ ವಾರವಷ್ಟೇ ಪಬ್ಲಿಕ್ TV ಪತ್ರಕರ್ತ ಹೇಮಂತ್ ಅಕ್ರಮ ಹಣವಸೂಲಿ ಪ್ರಕರಣದಲ್ಲಿ ಪೊಲೀಸ್ ಸ್ಟೇಷನ್ ಸೇರಿದ್ರು. ಈಗ ಸುವರ್ಣ ನ್ಯೂಸ್ ಸರದಿ.
ಹೌದು ವಿಜಯಪುರದ ಸುವರ್ಣ ನ್ಯೂಸ್ ವರದಿಗಾರ ಪ್ರಸನ್ನ ದೇಶಪಾಂಡೆ, ಕ್ಯಾಮೆರಾಮೆನ್ ಸಂಗಮೇಶ್ ಕುಂಬಾರ ಅರೆಸ್ಟ್ ಆಗಿದ್ದಾರೆ. ಇವರು ಮಾಡಿದಂತ ಪುಣ್ಯದ ಕೆಲಸ ಏನಿರಬಹುದು ಅಂತೀರಾ? ನೀವೆ ಓದಿ
ಡಾ|| ಕಿರಣ್ ವೋಸ್ವಾಲ್ ನಡೆಸುತ್ತಿರುವ ಆಸ್ಪತ್ರೆಯಲ್ಲಿ ಲಿಂಗ ಪರೀಕ್ಷೆ ಮಾಡಲಾಗುತ್ತಿದೆ ಎಂದು ಸುವರ್ಣ ಸೇರಿದಂತೆ ಸಂಗ್ರಾಮ ವಾರ ಪತ್ರಿಕೆಯ ರವಿ ಬಿಸನಾಳ, ಬಸವರಾಜ್ ಸೇರಿದಂತೆ 6 ಜನರ ಟೀಮ್ ವೈದ್ಯನನ್ನು 50 ಲಕ್ಷ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ಅವರ ಒತ್ತಡಕ್ಕೆ ಮಣಿದ ಡಾಕ್ಟರ್ ಹೋಟೆಲ್ ನಲ್ಲಿ 10 ಲಕ್ಷ ನೀಡುವುದಾಗಿ ತಿಳಿಸಿದ್ದಾರೆ. ಹಣದಾಸೆಗೆ ವೃತ್ತಿ ನಿಷ್ಠೆ ಮರೆತು ಅಂಗಲಾಚಲು ಬಂದಿದ್ದ ನೀಚ ಬುದ್ಧಿಗೆ ತಕ್ಕ ಪಾಠ ಸಿಕ್ಕಿದೆ. ಹೋಟೆಲ್ CCTV ಫುಟೇಜ್ ಆಧಾರದ ಮೇಲೆ APMC ಪೋಲಿಸರು FIR ದಾಖಲಿಸಿದ್ದು, ಸುವರ್ಣ ನ್ಯೂಸ್ ವರದಿಗಾರ ಪ್ರಸನ್ನ ದೇಶಪಾಂಡೆ, ಸಂಗ್ರಾಮ ಪತ್ರಿಕೆ ರವಿಬಿಸನಾಳ ಟೀಮನ್ನು ಅರೆಸ್ಟ್ ಮಾಡಿದ್ದಾರೆ.
ವೃತ್ತಿ ಧರ್ಮವನ್ನು ಧಂದೆಯಾಗಿ ಮಾರ್ಪಡಿಸುತ್ತಿರುವ ಇಂತಹ ದರೋಡೆಕೋರರನ್ನು ನೇರ, ದಿಟ್ಟ ನಿರಂತರವಾಗಿ ಸಂಬಂಧಿಸಿದ ಸುವರ್ಣ ವಾಹಿನಿ ವಜಾಗೊಳಿಸಿದೆ . ಇಂತಹ ಹಣಬಾಕರ ವಿರುದ್ಧ ಮುಂಬರುವ ದಿನಗಳಲ್ಲಿ ಸಾರ್ವಜನಿಕರ ನಡುವೆ "ಸಂಗ್ರಾಮ" ಹೇಗಿರುತ್ತದೆ ಎಂದು ಕಾದುನೋಡಬೇಕಿದೆ.
Sign up here to get the latest post directly to your inbox.