ಹುಬ್ಬಳ್ಳಿ : ನಗರದ ಜೈನ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನ ಅರ್ಥಪೂರ್ಣವಾಗಿ ಆಚರಿಸಲಾಯಿತು...
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ 50 ವರ್ಷಗಳ ಸಂಭ್ರಮವನ್ನ ವಿಭಿನ್ನ ರೀತಿಯಲ್ಲಿ ಆಯೋಜಿಸುವ ಉದ್ದೇಶದಿಂದ ಜೈನ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಪ್ರಾಂಶುಪಾಲರಾದ ಡಾ|| ಪ್ರಶಾಂತ ಬಣಕಾರ ರವರು ದೇಸಿ ಕ್ರೀಡೆ 2023ನ್ನು ಆಯೋಜಿಸಿದ್ದರು.
ಇಂದಿನ ಇಂಜನಿಯರಿಂಗ್ ವಿದ್ಯಾರ್ಥಿಗಳು ಸದಾ ಕಂಪ್ಯೂಟರ, ಟಿವಿ ,ಮೊಬೈಲ್ ಗಳಿಗೆ ಹೊಂದಿಕೊಂಡಿರುವ ವಿದ್ಯಾರ್ಥಿಗಳಿಗೆ ನಮ್ಮ ನೆಲ, ನಾಡು ,ಸಂಸ್ಕೃತಿ, ಕಲೆ ಗಳ ಮಹತ್ವ ತಿಳಿಸಲು ವಿವಿಧರೀತಿಯಾದ ದೇಸಿ ಕ್ರೀಡೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮತ್ತು ಮನೋರಂಜನೆ ನೀಡಲಾಯಿತು, ಸುಮಾರು 100ಕ್ಕು ಹೆಚ್ಚು ವಿದ್ಯಾರ್ಥಿಗಳು ಕಬಡ್ಡಿ, ಕೋಕೋ, ಲಗೋರಿ, ಬುಗರಿ, ಗೋಲಿ, ಗಿಲ್ಲಿ ದಾಂಡು, ಹಾಗೂ ಹಗ್ಗ ಜಗ್ಗಾಟ, ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿದರು, ನಂತರ ಪ್ರಾಂಶುಪಾಲರು ಎಲ್ಲಾ ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿ ನಮ್ಮ ನೆಲ, ಭಾಷೆ, ನಾಡು ನುಡಿಯ ಮಹತ್ವ ತಿಳಿಸಿದರು,
ಈ ಸಮಾರಂಭಕ್ಕೆ ಕಾಲೇಜಿನ ಎಲ್ಲಾ ಭೋದಕ ಭೋದಕೆತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸಾಕ್ಷಿಯಾದರು, ಈ ದೇಸಿ ಕ್ರೀಡೆ 2023ರ ಸಂಘಟನೆ ಯನ್ನೂ ಪ್ರೊ ನವೀನ್ ಶಿರೂರು ಹಾಗೂ ಡಾ|| ಭರತ್ ಕುಮಾರ್ ವಹಿಸಿಕೊಂಡಿದ್ದರು...
Sign up here to get the latest post directly to your inbox.