ಕಬ್ಬಿನ ಹೊಲಯಲ್ಲಿ ನವಜಾತ ಶಿಶು ಪತ್ತೆ..!

Wed, Oct 04, 2023

ಹುಬ್ಬಳ್ಳಿ : ಕಬ್ಬಿನ ಹೊಲದಲ್ಲಿ ನವಜಾತ ಶಿಶು ಪತ್ತೆಯಾಗಿರುವ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.... 


ಹೌದು ಕೆ.ಇಬಿ ಗ್ರೀಡ್ ಬಳಿಯ ಕಬ್ಬಿನ ಹೊಲದಲ್ಲಿ ಮಗುವಿಗೆ ಜನ್ಮ ನೀಡಿ ತಾಯಿ ಪರಾರಿಯಾಗಿದ್ದಾಳೆ...

ಸುಮಾರು ಮೂರು ಕೆಜಿ ತೂಕವಿರುವ ಗಂಡು ಶಿಶು ಇರುವೆಗಳು ಕಚ್ಚಲು ಆರಂಭಿಸಿದಾಗ ಧ್ವನಿ ಕೇಳಿ ಸ್ಥಳೀಯರಿಂದ  ರಕ್ಷಿಸಿ,‌ ಆರೈಕೆ ಮಾಡಿ ಶಿಶುಪಾಲನಾ ಕೇಂದ್ರಕ್ಕೆ ಮಗುವನ್ನು ರವಾನಿಸಿದ್ದಾರೆ , 

ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...

Like our news?