ಸ್ವಚ್ಛತೆ ಕಾಪಾಡದ ಬೀದಿ ಬದಿ ವ್ಯಾಪಾರಿಗಳಿಗೆ ದಂಡ ಹಾಕಿದ ಮಹಾನಗರ ಪಾಲಿಕೆ ಅಧಿಕಾರಿಗಳು..!

Tue, Sep 12, 2023

ವಿಜಯಪುರ : ಮಹಾನಗರ ಪಾಲಿಕೆ ಆಯುಕ್ತ ಆದೇಶ ಅನ್ವಯ ಇಂದು ಬೆಳಿಗ್ಗೆ ಅರೋಗ್ಯ ನಿರೀಕ್ಷಕರ ನೇತೃತ್ವದ ತಂಡ ನಗರದ ಗಗನ ಮಹಲ್ ಹತ್ತಿರದ ಬೀದಿ ಬದಿ ವ್ಯಾಪಾರಿಗಳು ಕಸದ ಡಬ್ಬಿ ಹಾಗೂ  ಸ್ವಚ್ಛತೆ ಕಾಪಾಡದ ಹಿನ್ನಲೆಯಲ್ಲಿ ದಂಡ ಹಾಕಿ  ಜಾಗೃತಿ ಮೂಡಿಸಿದರು...


ಹೌದು ನಗರದಲ್ಲಿ ಬೀದಿ ಬದಿಯ ವ್ಯಾಪಾರಿಗಳು ಸ್ವಚ್ಛತೆ ಕಾಪಾಡದ  ಕುರಿತು ಸಾರ್ವಜನಿಕ ದೂರುಗಳು ಬಂದ  ಹಿನ್ನಲೆಯಲ್ಲಿ ಸುಮಾರು ವ್ಯಾಪಾರಿಗಳಿಗೆ  5000/- ರೂ ದಂಡ ಹಾಕಲಾಯಿತು ಮತ್ತು ಗಗನ ಮಹಲ್ ಆವರಣ್ ವನ್ನು ಪ್ಲಾಸ್ಟಿಕ್ ಮುಕ್ತ ವನ್ನಾಗಿ ಮಾಡಲು ಬೀದಿ ಬದಿ ವ್ಯಾಪಾರಿಗಳು


ಗಗನ ಮಹಲ್ ನಲ್ಲಿ ಬರುವ ಸಾರ್ವಜನಿಕರಿಗೆ ಪ್ಲಾಸ್ಟಿಕ್ ತಟ್ಟೆ, ಗ್ಲಾಸ್ ಗಳಲ್ಲಿ  ತಿಂಡಿ ತಿನಿಸುಗಳನ್ನು  ನೀಡದಂತೆ ಆವರಣದಲ್ಲಿ ಸ್ವಚ್ಛತೆ ಕಾಪಾಡುವಂತೆ ಕಸದ ಡಬ್ಬಿಗಳನ್ನು ಬಳಸುವಂತೆ ಸೂಚಿಸಿದರು,


ಈ ವೇಳೆಯಲ್ಲಿ ಪಾಲಿಕೆಯ ಹಿರಿಯ ಅರೋಗ್ಯ ನಿರೀಕ್ಷಕ ರಫೀಕ್ ಅಹ್ಮದ್ ಬಳಗಾರ್  ಮತ್ತು ಸುಪ್ರವೈಸರ್ ಪೀರಪ್ಪ ಚಲವಾದಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು...

Like our news?