ಚಂದ್ರಯಾನ -3 ಯಶಸ್ವಿಯಾಗಿ ಲ್ಯಾಂಡ್ ; ವಿಜಯಪುರದಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು..!

Wed, Aug 23, 2023

ವಿಜಯಪುರ : ಚಂದ್ರಯಾನ -03 ವಿಕ್ರಂ ಲ್ಯಾಂಡರ್  ಚಂದ್ರನ ಅಂಗಳದಲ್ಲಿ  ಯಶಸ್ವಿಯಾಗಿ ಭೂಸ್ಪರ್ಶ ಮಾಡಿದ ನಂತರ ಇಡೀ ಬಿಜೆಪಿ ಕಾರ್ಯಾಲಯದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.


ಬೃಹತ್ ಎಲ್‌ಇಡಿ ಪರದೆಯಲ್ಲಿ ಈ ಕೂತೂಹಲ ಕ್ಷಣಗಳನ್ನು ಆನಂದದಿAದ ನೋಡಿದ ಬಿಜೆಪಿ ಕಾರ್ಯಕರ್ತರು ಚಂದ್ರಯಾನ ಯಶಸ್ವಿಯಾಗುತ್ತಿದ್ದಂತೆ ಭಾರತ ಮಾತಾ ಕೀ ಜೈ.....ಮೇರಾ ಭಾರತ ಮಹಾನ್ ಎಂಬ ಘೋಷಣೆಗಳನ್ನು ಮೊಳಗಿಸಿ ಪಟಾಕಿ ಸಿಡಿಸಿ ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿದರು.


ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ವಿಕ್ರಂ ಲ್ಯಾಂಡರ್ ಯಶಸ್ವಿ ಸಾಧನೆಯ ಹಿಂದೆ ಪ್ರಧಾನಿ ಮೋದಿ ಅವರ ಪರಿಶ್ರಮ ಹಾಗೂ ಸಮಸ್ತ ಭಾರತೀಯರ ಪ್ರಾರ್ಥನೆ ಅಡಗಿದೆ, ಇಸ್ರೋ ವಿಜ್ಞಾನಿಗಳು ಇಡೀ ದೇಶದ ಪ್ರತಿಯೊಬ್ಬ ಪ್ರಜೆ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ, ಅವರ ಪರಿಶ್ರಮಕ್ಕೆ ಇಂದು ಯಶಸ್ಸು ದೊರಕಿದೆ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗದ ಪ್ರಭಾರಿಗಳಾದ ಚಂದ್ರಶೇಖರ ಕವಟಗಿ, ಮುಖಂಡರಾದ ಪ್ರಕಾಶ ಅಕ್ಕಲಕೋಟ, ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಉಮೇಶ ಕೋಳಕೂರ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗುರ, ಪಾಲಿಕೆ ಸದಸ್ಯರಾದ ಮಳುಗೌಡ ಪಾಟೀಲ, ಭೀಮಾಶಂಕರ ಹದನೂರ, ರಾಹುಲ ಜಾಧವ, ವಿಠ್ಠಲ ಹೊಸಪೇಟ, ವಿವೇಕಾನಂದ ಡಬ್ಬಿ, ವಿಜಯ ಜೋಶಿ, ಸುವರ್ಣಾ ಕುರ್ಲೇ, ರಾಜೇಶ್ವರಿ, ಶಾಂತಾ ಉತ್ಲಾಸ್ಕರ, ಸುಶ್ಮಿತಾ ಹೊಂಡಕರ, ಸುಮಂಗಲಾ ಕೋಟಿ, ಮಹೇಶ ಒಡೆಯರ, ಭರತ ಕೋಳೂರ, ಕೃಷ್ಣಾ ಗುನಾಳಕರ, ರಾಜೇಶ ತವಸೆ, ಸಂದೀಪ ಪಾಟೀಲ, ರಾಜು ವಾಲಿ, ವಿಕಾಸ ಪದಕಿ, ಚಂದು ಚೌಧರಿ, ಪಾಪುಸಿಂಗ ರಜಪೂತ, ಬಸವರಾಜ ಕುರುವಿನಶೆಟ್ಟಿ, ಅಬ್ದುಲ ಸತ್ತಾರ, ಆನಂದ ಮುಚ್ಚಂಡಿ, ಕಾಂತು ಶಿಂಧೆ, ಕಲ್ಮೇಶ ಹಿರೇಮಠ, ಶಂಕರ ಹೂಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Like our news?