ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್ | ಹೊಸ ಫೀಚರ್ " ವಾಯ್ಸ್ ಸ್ಟೇಟಸ್ " ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!

Wed, May 31, 2023

ಮೆಟಾ ಕಂಪನಿಯು ವಾಟ್ಸಾಪ್ ನಲ್ಲಿ ಹೊಸ ಹೊಸ ಫೀಚರ್ಗಳನ್ನು ಅಳವಡಿಸುವ ಮೂಲಕ ಇತ್ತೀಚೆಗೆ  ಬಳಕೆದಾರ ಸ್ನೇಹಿಯಾಗುತ್ತಿದೆ...


ಈ ಬಾರಿ ವಾಟ್ಸಾಪ್ ಅಪ್ಡೇಟ್ ಮಾಡಿದ ಕೂಡಲೆ  ನೀವು  " ವಾಯ್ಸ್ ಸ್ಟೇಟಸ್ " ಎಂಬ ಹೊಸ ಫೀಚರನ್ನು  ಬಳಸಬಹುದಾಗಿದೆ.. ಏನಿದು ವಾಯ್ಸ್ ಸ್ಟೇಟಸ್ ? ಇದನ್ನು ಹೇಗೆ ಉಪಯೋಗಿಸಿಕೊಳ್ಳುವುದು ಅನ್ನೋದನ್ನು ತಿಳಿಯೋಣ ಬನ್ನಿ...


ಹಳೆ ವಾಟ್ಸಾಪ್ ವರ್ಶನಲ್ಲಿ  ನೀವು ನಿಮ್ಮ  ವಾಟ್ಸಾಪ್ ಸ್ಟೇಟಸ್ ಅಲ್ಲಿ ಕೇವಲ ಫೋಟೋ , ಅಥವಾ  30 ಸೆಕೆಂಡುಗಳ ವಿಡಿಯೋಗಳನ್ನು ಹಾಗು ಬರವಣಿಗೆಗಳನ್ನು ಹಾಕಬಹುದಿತ್ತು ಆದರೆ ಈ ಅಪ್ಡೇಟ್ ವರ್ಶನ್ ವಾಟ್ಸಾಪ್ ನಲ್ಲಿ ಮೇಲಿ ಆಪ್ಶನ್ ಜೊತೆಗೆ ನಿಮ್ಮ  ವಾಯ್ಸ್ ರೆಕಾರ್ಡ್ ಅನ್ನು  ಸ್ಟೇಟಸ್ಸಾಗಿ  ಹಾಕಬಹುದು.. ಇದೇ ಹೊಸ ವಾಯ್ಸ್ ಸ್ಟೇಟಸ್ ಫೀಚರ್...

ವಾಯ್ಸ್ ಸ್ಟೇಟಸ್ ಫೀಚರನ್ನು ಬಳಸುವ  ವಿಧಾನ :- 

ಮೊದಲಿಗೆ ನಿಮ್ಮ ವಾಟ್ಸಾಪನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ ಅಪ್ಡೇಟ್ ಮಾಡಿ ನಂತರ ವಾಟ್ಸಾಪ್ ನಲ್ಲಿ  ಸ್ಟೇಟಸ್ ಹಾಕುವ ಜಾಗಕ್ಕೆ ಬನ್ನಿ...


ಕೆಳಗಿನ ಬರವಣಿಗೆ ಐಕಾನನ್ನು ಧೀರ್ಘವಾಗಿ ಪ್ರೆಸ್ ಮಾಡಿ ; ಆಗ  ಮೈಕ್ ಆನ್ ಆದದ್ದು ಧೃಡಪಡುತ್ತದೆ ನಂತರ ನಿಮ್ಮ  ವಾಯ್ಸ್ ಮೆಸೇಜನ್ನು  ರೆಕಾರ್ಡ್ ಮಾಡಿ...
ರೆಕಾರ್ಡ್ ಆದ ವಾಯ್ಸನ್ನು  ಸ್ಟೇಟಸ್ಸಾಗಿ  ಅಪ್ಲೋಡ್ ಮಾಡಿ.. ಹೀಗೆ ನೀವು  ನಿಮ್ಮ ಮೊಬೈಲ್ ನ ವಾಯ್ಸ್ ಸ್ಟೇಟಸ್ ಫೀಚರನ್ನು  ಬಳಸಿಕೊಳ್ಳಬಹುದು...ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ "ಎಕ್ಸ್ಪ್ರೆಸ್ ಪ್ರೈವೆಟ್ಲಿ " ಎಂಬ ಆಯ್ಕೆ ಇದ್ದು ;  ನೀವು ಯಾರಿಗೆ ವಾಯ್ಸ್  ಸ್ಟೇಟಸ್ ಕಾಣಿಸಬೇಕೆಂದು ಎಣಿಸುತ್ತಿರೋ ಅವರನ್ನು ಮಾತ್ರ ಆಯ್ಕೆ ಮಾಡಿ  ಅವರಿಗೆ ಮಾತ್ರ ವಾಯ್ಸ್ ಸ್ಟೇಟಸ್ ಕಳುಹಿಸಬಹುದು..


ಒಟ್ಟಿನಲ್ಲಿ ಪ್ರತಿಬಾರಿಯು ಮೆಟಾ ಕಂಪೆನಿಯು  ಬಹುಬಳಕೆಯ ವಾಟ್ಸಾಪ್ ನಲ್ಲಿ  ಹೊಸ ಆವಿಷ್ಕಾರಗಳನ್ನು ಪರಿಚಯಿಸುವುದರ ಮೂಲಕ  ಬಳಕೆದಾರರನ್ನು ತನ್ನತ್ತ ಸೆಳೆದುಕೊಳ್ಳುವುದರಲ್ಲಿ ನಿರತವಾಗಿರುತ್ತದೆ ಎಂದರೆ ತಪ್ಪಾಗಲಾರದು.. ಹಾಗೆಯೇ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ವಾಯ್ಸ್ ಸ್ಟೇಟಸ್ ಫೀಚರ್  ಬಳಸಿ ನೋಡಿ...


✍️ ಲವೀನಾ ಸೋನ್ಸ್...

Like our news?