ತೆನೆ ಇಳಿಸಿ ; ಕಮಲ ಹಿಡಿದ ಎಸ್ ಕೆ ಬೆಳ್ಳುಬ್ಬಿ ಮಾತೃ ಪಕ್ಷಕ್ಕೆ ಘರ್ ವಾಪಸ್ಸಿ..... S.KBellubi#basavan bagevagi#BJP....

Sun, Mar 24, 2019

ವಿಜಯಪುರ: ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ  ಜೆಡಿಎಸ್ ತೊರೆದು ಬಿಜೆಪಿಗೆ ಘರ ವಾಪಸ್ಸಿಯಾಗಿದ್ದಾರೆ .ಹೌದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಜೆಡಿಎಸ್ ತೆನೆ ಹೊತ್ತಿದ್ದ ಬೆಳ್ಳುಬ್ಬಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸದಲ್ಲಿ ಬೆಂಬಲಿಗರೊಂದಿಗೆ ಬಿಜೆಪಿಗೆ  ಅಧಿಕೃತವಾಗಿ ಘರ್ ವಾಪಸ್ಸಿಯಾಗಿದ್ದಾರೆ . ಗೋವಿಂದ ಕಾರಜೋಳ , ಉಮೇಶ್ ಕತ್ತಿ , ಮುರುಗೇಶ್ ನಿರಾಣಿ ನಾಯಕರ ಸಮ್ಮುಖದಲ್ಲಿ ಎಸ್ ಕೆ ಬೆಳ್ಳುಬ್ಬಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

Like our news?