ಬೆಂಗಳೂರು : ಧಾರಾಕಾರ ಮಳೆಯಿಂದಾಗಿ ಕೆ.ಆರ್ ಸರ್ಕಲ್ ಅಂಡರ್'ಪಾಸ್ ನ ನೀರಿನಲ್ಲಿ ಸಿಲುಕಿ ಐಟಿ ಉದ್ಯೋಗಿ ಭಾನುರೇಖಾ ಅವರು ಮೃತಪಟ್ಟ ಸುದ್ದಿ ತಿಳಿದು ಉಪ-ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಸಚಿವ ರಾಮಲಿಂಗಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ...
ಈ ವೇಳೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಸಂಭವನೀಯ ಅನಾಹುತಗಳನ್ನು ತಡೆಯಲು ಮುನ್ನೆಚ್ಚರಿಕೆ ವಹಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಹಾಗೂ ಸಂಬಂಧಪಟ್ವ ಇಲಾಖೆಗಳ ಅಧಿಕಾರಿಗಳಿಗೆ ಉಭಯ ಮಂತ್ರಿಗಳು ಸೂಚನೆ ನೀಡಿದ್ದಾರೆ...
Sign up here to get the latest post directly to your inbox.