ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸೇರಿದಂತೆ 8 ಶಾಸಕರಿಗೆ ಸಚಿವ ಸ್ಥಾನ | ಇಲ್ಲಿದೆ ಸಂಪೂರ್ಣ ಮಾಹಿತಿ..!

Sat, May 20, 2023

ದೆಹಲಿ : ಇಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಪದಗ್ರಹಣ ಮಾಡುವ ಬೆನ್ನಲ್ಲೇ   8  ಶಾಸಕರಿಗೆ ಸಚಿವ ಸ್ಥಾನ ನೀಡಲು  ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ...


ಹೌದು, ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸೇರಿದಂತೆ ಎಲ್ಲಾ ಸಮುದಾಯದ ಹಿರಿಯ ನಾಯಕರಿಗೆ ಮೊದಲನೇ ಹಂತದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ತನ್ನ ಭದ್ರಕೋಟೆಯನ್ನು  ಇನ್ನಷ್ಟು ಬಲಪಡಿಸಿಕೊಂಡು ಆಡಳಿತದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮುಂದಾಗಿದೆ...

ಈಗಾಗಲೇ  ಕಾಂಗ್ರೆಸ್ ಜನರಲ್ ಸೆಕರೇಟರಿ  ಕೆ.ಸಿ. ವೇಣುಗೋಪಾಲ್ ಲೆಟರ್ ಹೆಡ್ ಮುಖೇನ 8 ಸಚಿವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂದೇಶ ರವಾನಿಸಲಾಗಿದ್ದು ; ನೂತನವಾಗಿ ಆಯ್ಕೆಗೊಂಡಿರುವ  ಸಚಿವರ  ಡಿಟೇಲ್ಸ್  ಇಲ್ಲಿದೆ...


Like our news?