ರಾಮದುರ್ಗ | ಅಶೋಕ್ ಪಟ್ಟಣಗೆ ಅದ್ಧೂರಿ ಸ್ವಾಗತ ನೀಡಿದ ಜನತೆ..!

Sun, May 14, 2023

ಬೆಳಗಾವಿ : ರಾಮದುರ್ಗ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮಹದೇವಪ್ಪ ಪಟ್ಟಣ ಅವರನ್ನು ಅದ್ಧೂರಿಯಿಂದ ರಾಮದುರ್ಗ ನಗರಕ್ಕೆ ಬರಮಾಡಿಕೊಳ್ಳಲಾಯಿತು.


ಹೌದು ನಗರದ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಅಶೋಕ ಪಟ್ಟಣ ಅಭಿಮಾನಿಗಳಿಗೆ ಕೈ ಮುಗಿದು ಧನ್ಯವಾದ ತಿಳಿಸಿದರು. ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಅಭಿಮಾನಿಗಳು ಸೇಬು ಹಣ್ಣಿನಿಂದ ತಯಾರಿಸಿದ ಬೃಹತ್ ಮಾಲೆಯನ್ನು ಅಶೋಕ ಪಟ್ಟಣ ಅವರಿಗೆ ಅರ್ಪಿಸಿ  ಕಾರ್ಯಕರ್ತರು ಪಟಾಕಿ ಸಿಡಿಸಿ ಗುಲಾಲ್ ಎರಚುವ ಮೂಲಕ ಸಂಭ್ರಮಿಸಿದರು, ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಸಾವಿರಾರು ಕಾರ್ಯಕರ್ತರೊಡನೆ ಅಶೋಕ ಪಟ್ಟಣ ಅವರು ಮೆರವಣಿಗೆಯಲ್ಲಿ ಪಾಲ್ಗೊಂಡುದ್ದರು ಸಂಭ್ರಮಿಸಿದರು....

ವರದಿ : ನೂರಮಹ್ಮದ ಅಕ್ಕೋಜಿ..!

Like our news?