ನನಗೆ ಮತ ನೀಡಿ ರಾಮದುರ್ಗದ ಸಮಗ್ರ ಅಭಿವೃದ್ಧಿ ನನ್ನ ಗುರಿ ಕೈ ಅಭ್ಯರ್ಥಿ ಅಶೋಕ್ ಪಟ್ಟಣ..!

Thu, May 04, 2023

ರಾಮದುರ್ಗದ ಸಮಗ್ರ ಅಭಿವೃದ್ಧಿ ನನ್ನ ಗುರಿ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ ಮತಯಾಚಿಸಿದರು...


ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ ರೋಡ್ ಶೋ ನಡೆಸಿ ಮಾತನಾಡಿದ ಅವರು ಮಲಪ್ರಭಾ ನದಿಯಲ್ಲಿನ ಹೂಳು ತೆಗೆಯಿಸಿ, ನದಿ ಅಗಲೀಕರಣ ಮಾಡಿದ್ದರಿಂದ ತಾಲೂಕಿನಲ್ಲಿ ಉಂಟಾಗುತ್ತಿರುವ ಪ್ರವಾಹದ ಹಾನಿಯನ್ನು ಹಿಂದಿನ ಬಾರಿ ತಗ್ಗಿಸಲು ಸಾಧ್ಯವಾಗಿದೆ. ಜನರು ನಾನು ಮಾಡಿರುವ ಅಭಿವೃದ್ಧಿ ನೋಡಿ ಮತ ನೀಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ ಮತದಾರರಲ್ಲಿ ಮನವಿ ಮಾಡಿದರು.

ನಾನು ಶಾಸಕನಿದ್ದ ಸಂದರ್ಭದಲ್ಲಿ ಯಾವುದೇ ಸಮುದಾಯದವರಾಗಲಿ ಬಂದು ಕೇಳಿದ ಎಲ್ಲ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಸಮುದಾಯ ಭವನ, ಸಿಸಿ ರಸ್ತೆಗಳು, ಆಶ್ರಯ ಮನೆಗಳು, ಕೊಳವೆ ಬಾವಿಗಳು ಸೇರಿದಂತೆ ಜನರಿಗೆ ಅವಶ್ಯಕ ಸೌಲಭ್ಯ ಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಇನ್ನೂ ಅನೇಕ ಕೆಲಸ ಕಾರ್ಯಗಳನ್ನು ಮಾಡಿ ರಾಮದುರ್ಗಮತಕ್ಷೇತ್ರವನ್ನು ಅಭಿವೃದ್ಧಿಪಡಿಸುವುದೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದೆ. ಅನೇಕ ಜನಪರ ಕಾರ್ಯಕ್ರಮಗಳಾದ ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ರೈತರ ಸಾಲಮನ್ನಾ ಸೇರಿದಂತೆ ಆನೇಕ ಜನಪರ ಕೆಲಸಗಳನ್ನು ಮಾಡಿ ಹಸಿವು ಮುಕ್ತ ರಾಜ್ಯವನ್ನು ಮಾಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರೆಂಟಿ. ಕಾರಣ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. 

ಈ ಸಂಧರ್ಭ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾದ ಜಹೂರ ಹಾಜಿ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ರಾಯಪ್ಪ ಕತ್ತಿ, ಕಾಂಗ್ರೆಸ್ ಕಿಸಾನ್ ಘಕದ ರಾಜ್ಯ ಸಂಚಾಲಕ ರಮೇಶ ಅಣ್ಣಿಗೇರಿ, ಪಕ್ಷದ ಮುಖಂಡರಾದ ಕೃಷ್ಣಾ ಮುಮ್ಮರಡ್ಡಿ, ಸಿ.ಬಿ. ಪಾಟೀಲ, ಸಿದ್ಧಿಂಗಪ್ಪ ಸಿಂಗಾರಗೊಪ್ಪ ಬಾಳಪ್ಪ ರಡರಟ್ಟಿ, ಬಸವರಾಜ ಉಳ್ಳಾಗಡ್ಡಿ ಆರ್.ಎಚ್. ತೋಳಗಟ್ಟಿ, ರಾಜು ಮಾನೆ, ಕೃಷ್ಣಗೌಡ ಪಾಟೀಲ, ಸೋಮಶೇಖರ ಸೊಗಲದ, ಸೇರಿದಂತೆ ಮುಂತಾದವರು ಇದ್ದರು

ವರದಿ : ನೂರಮಹ್ಮದ ಅಕ್ಕೋಜಿ ರಾಮದುರ್ಗ

Like our news?